ಅಂಗರಕರ್ಯ: ವಾರ್ಷಿಕ ಖುತುಬಿಯ್ಯತ್, ಉಪನ್ಯಾಸ
Update: 2017-05-22 17:24 IST
ಮೂಡುಬಿದಿರೆ, ಮೇ 22: ಇಲ್ಲಿಗೆ ಸಮೀಪದ ಅಂಗರಕರ್ಯ ಮುಹ್ಯುದ್ದೀನ್ ಜುಮಾ ಮಸೀದಿ ಇದರ ಅಂಗಸಂಸ್ಥೆ ಅಲ್-ಗೌಸಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆಯುತ್ತಿರುವ ಮಾಸಿಕ ಖುತುಬಿಯ್ಯತ್ ನ ವಾರ್ಷಿಕವು ಮೇ 25 ರಂದು ರಾತ್ರಿ ಸ್ಥಳೀಯ ಖತೀಬರಾದ ಹಾರೀಸ್ ದಾರಿಮಿ ನೇತೃತ್ವದಲ್ಲಿ ನಡೆಯಲಿದೆ.
ಆ ಪ್ರಯುಕ್ತ ಅದೇ ದಿನ ಮಗ್ರಿಬ್ ನಮಾಝಿನ ಬಳಿಕ 'ಮರ್ ಹಬ ಯಾ ಶಹರ್ ರಮಳಾನ್' ಎಂಬ ವಿಷಯದಲ್ಲಿ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ವಿ. ಸ್ವದಖತುಲ್ಲಾ ಫೈಝಿ ಉಪನ್ಯಾಸ ನೀಡಲಿದ್ದಾರೆ.
ಜಮಾಅತ್ ಅಧ್ಯಕ್ಷ ನಝೀರ್ ಅಹಮದ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಗಳನ್ನು ಮೂಡುಬಿದಿರೆ ಕೇಂದ್ರ ಜುಮಾ ಮಸೀದಿಯ ಖತೀಬ್ ಮುಸ್ತಫಾ ಯಮಾನಿ ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.