ನಂತೂರ್‌ನಲ್ಲಿ ‘ಆರ್ಟಿಕ್ ಫರ್ನಿಚರ್, ಇಂಟೀರಿಯರ್ಸ್’ಗಳ ಹೊಸ ಶೋರೂಮ್ ಉದ್ಘಾಟನೆ
ಮಂಗಳೂರು, ಮೇ 22: ಕಾಸರಗೋಡಿನಲ್ಲಿ ಕಳೆದ 3 ವರ್ಷಗಳಿಂದ ಫರ್ನಿಚರ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಆರ್ಟಿಕ್ ಫರ್ನಿಚರ್ಸ್ ಇದರ ಹೊಸ ಶೋರೂಮ್ ‘ಆರ್ಟಿಕ್ ಫರ್ನಿಚರ್ ’ ನಗರದ ನಂತೂರು ಬಳಿಯ ಆಲ್ವಾರಿಸ್ ಸೆಂಟರಿನಲ್ಲಿ ಸೋಮವಾರ ಶುಭಾರಂಭಗೊಂಡಿತು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೂತನ ಶೋರೂಂ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಪೋರೇಟರ್ ರೂಪಾ ಡಿ ಬಂಗೇರ, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ರೆ.ಫಾ. ನೊಯಾಲ್ ಕರ್ಕೇಡಾ, ಪಿಎಫ್‌ಐ ರಾಜ್ಯ ಸಮಿತಿಯ ಸದಸ್ಯ ಶಾಫಿ ಬೆಳ್ಳಾರೆ, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಪಾಲುದಾರರಾದ ಜಾಯ್ ಜಾರ್ಜ್, ಬಿ.ಪಿ.ಕಮಲುದ್ದೀನ್, ಅಬ್ದುಲ್ ಸಾಬೀತ್ ಮೊದಲಾದವರು ಉಪಸ್ಥಿತರಿದ್ದರು.
- ಆರ್ಟಿಕ್ ಫರ್ನಿಚರ್‌ನಲ್ಲಿ ಕೇರಳೀಯರ ಅತ್ಯಾಧುನಿಕ ಮತ್ತು ಟ್ರೆಡಿಶನಲ್ ಶೈಲಿಯ ಗೃಹಪಯೋಗದ ಮತ್ತು ಆಫೀಸ್ ಫರ್ನಿಚರ್‌ಗಳ ವಿಶೇಷ ಸಂಗ್ರಹವಿದೆ. ಮನೆ ಹಾಗೂ ಕಛೇರಿಗಳಿಗೆ ಆಧುನಿಕ ರೂಪ ನೀಡಲು ಸೂಕ್ತವಾದ, ಅತ್ಯಾಧುನಿಕ ಶೈಲಿಗಳಲ್ಲಿ ಕಾರ್ಯನಿರ್ವಹಿಸುವ, ಅದ್ಭುತ ವಿನ್ಯಾಸಗಳ, ಮನಸ್ಸಿಗೆ ಮುದನೀಡುವ, ದೋಷರಹಿತ ಫಿನಿಶಿಂಗ್‌ನಿಂದ ತಯಾರಿಸಲ್ಪಟ್ಟ ಪೀಠೋಪಕರಣಗಳು ಸುಮಾರು 20,000 ಚದರ ಅಡಿಯ ಶೋರೂಂನಲ್ಲಿ ಲಭ್ಯವಿದ್ದು, ಆಯ್ಕೆಗೆ ವಿಫುಲ ಅವಕಾಶಗಳನ್ನು ಹೊಂದಿರುವ ಅಪಾರ ಸಂಗ್ರಹವಿರಲಿದೆ ಮತ್ತು ಯಾವುದೇ ಗ್ರಾಹಕನ ಅಭಿರುಚಿಗೆ ತಕ್ಕಂತಹ ವಿನ್ಯಾಸ ಹಾಗೂ ಬಜೆಟ್‌ಗೆ ಖರೀದಿಯು ಹೊಂದಿಕೊಳ್ಳಲಿದೆ.
ವುಡನ್, ಸ್ಟೀಲ್, ಕಬ್ಬಿಣದ ಫರ್ನಿಚರ್- ಸೋಫಾ, ಬೆಡ್, ಟೇಬಲ್, ವಾರ್ಡ್‌ರೋಬ್, ಕಪಾಟು, ಡೈನಿಂಗ್ ಟೇಬಲ್, ಚೇರ್ಸ್, ಅಲ್‌ಮೈರಾಗಳು-ಲಿವಿಂಗ್, ಕಿಚನ್, ಡೈನಿಂಗ್, ಬೆಡ್‌ರೂಮ್‌ಗಳಿಗೆ ವಿವಿಧ ಶ್ರೇಣಿಗಳಲ್ಲಿ ಹಾಗೂ ಬೇಕಾದ ಗಾತ್ರಗಳಲ್ಲಿ ಲಭಿಸಲಿವೆ. ಆಕರ್ಷಕ ಇಂಟೀರಿಯರ್ಸ್ ಸಲಹೆ ಮತ್ತು ಸಾಮಾಗ್ರಿಗಳು, ಮ್ಯಾಟ್ರೆಸ್‌ಗಳು ಲಭ್ಯವಿದ್ದು, ಆಫೀಸ್ ಮತ್ತು ಕಛೇರಿಗಳ ಶೃಂಗಾರಕ್ಕೆ ಯಾವುದೇ ಸಾಮಗ್ರಿಗಳು ಇಲ್ಲಿ ದೊರೆಯಲಿದೆ.