ಮರಳಿ ಜಯರಾಮ ಬನಾನ್ ಒಡೆತನಕ್ಕೆ ‘ಓಶಿಯನ್ ಪರ್ಲ್ ಹೊಟೇಲ್ಸ್ ಪ್ರೈವೇಟ್ (ಲಿ)’

Update: 2017-05-22 15:29 GMT

ಮಂಗಳೂರು ಮೇ 22: ಸಾಗರರತ್ನ ಸರಣಿ ರೆಸ್ಟೋರೆಂಟ್‌ಗಳು ಮರಳಿ ಸ್ಥಾಪಕರ ಒಡೆತನಕ್ಕೆ ಸೇರಿದೆ. ಜಯರಾಮ ಬನಾನ್ 1986ರಲ್ಲಿ ಸಾಗರತ್ನ ರೆಸ್ಟೋರೆಂಟ್‌ಗಳನ್ನು ಆರಂಭಿಸಿ 2011ರಲ್ಲಿ ಪ್ರೈವೇಟ್ ಇಕ್ವೀಟಿ ಫರ್ಮ್‌ಗಳಿಗೆ ಮಾರಾಟ ಮಾಡಿದ್ದರು. ಇದೀಗ ಜಯರಾಮ ಬನಾನ್ ಪಿಎಫ್ ಫರ್ಮ್‌ನ ಜೊತೆಗಿನ ಪರಸ್ಪರ ಒಪ್ಪಿಗೆಯೊಂದಿಗೆ ಸಾಗರ ರತ್ನ ಸರಣಿ ರೆಸ್ಟೋರೆಂಟ್‌ಗಳ ಒಡೆತನವನ್ನು ಮರಳಿ ಪಡೆದುಕೊಂಡಿದ್ದು ನೂತನ ಸಾರಥ್ಯದಲ್ಲಿ ಸಾಗರರತ್ನ ಸಮೂಹದ ರೆಸ್ಟೋರೆಂಟ್‌ಗಳು ಓಶಿಯನ್ ಪರ್ಲ್ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನೊಂದಿಗೆ ಕಾರ್ಯಾಚರಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.

ಎರಡು ದಶಕಗಳ ಹಿಂದೆ ಸಾಗರ ರತ್ನ ಸರಣಿ ರೆಸ್ಟೋರೆಂಟ್‌ಗಳನ್ನು ಆರಂಭಿಸಿರುವ ಜಯರಾಮ ಬನಾನ್ ಮರಳಿ ಅವುಗಳ ಒಡೆತನವನ್ನು ಪಡೆದಿರುವುದು ಸಂತಸ ತಂದಿದೆ. ಪ್ರಸಕ್ತ ದೇಶಾದ್ಯಂತ 12 ರಾಜ್ಯಗಳಲ್ಲಿ 36 ರೆಸ್ಟೋರೆಂಟ್‌ಗಳನ್ನು ಹಾಗೂ 52 ಪ್ರಾಂಚೈಸ್‌ಗಳನ್ನು ಹೊಂದಿದೆ. ಮುಂದಿನ ಮೂರು ವರ್ಷಗಳಲ್ಲಿ ಹೊಸದಾಗಿ ನೂರು ರೆಸ್ಟೋರೆಂಟ್‌ಗಳನ್ನು ಮತ್ತು ಅಷ್ಟೇ ಪ್ರಮಾಣದ ಪ್ರಾಂಚೈಸ್‌ಗಳನ್ನು ಹೊಂದುವ ಗುರಿ ಹೊಂದಲಾಗಿದೆ ಮತ್ತು ಸಾಗರ ರತ್ನ ರೆಸ್ಟೋರೆಂಟ್ ಗಳನ್ನು ದೇಶದ ಅತ್ಯುತ್ತಮ ಸಸ್ಯಾಹಾರಿ ರೆಸ್ಟೋರೆಂಟ್‌ಗಳಾಗಿ ಅಭಿವೃದ್ಧಿ ಪಡಿಸುವ ವಿಶ್ವಾಸವನ್ನು ಜಯರಾಮ್ ಬನಾನ್ ಹೊಂದಿರುವುದಾಗಿ ಪ್ರಕಟಣೆ ತಿಳಿಸಿದೆ.

ದೆಹಲಿಯ ಡಿಫೆನ್ಸ್ ಕಾಲನಿ ಬಳಿ 1986ರಲ್ಲಿ ಜಯರಾಮ ಬನಾನ್ ಆರಂಭಿಸಿದ ಸಣ್ಣ ಸಸ್ಯಹಾರಿ ರೆಸ್ಟೋರೆಂಟ್ ‘ಸಾಗರ್ ’ಬಳಿಕ ದೇಹಲಿಯಲ್ಲಿ ಆರಂಭಿಸಲಾದ ಇಡ್ಲಿ, ವಡೆಗಳ ಮಾರಾಟದ 70 ಸರಣಿ ರೆಸ್ಟೋರೆಂಟ್‌ಗಳು ದೇಶಾದ್ಯಂತ ಸಾಗರ ರತ್ನ ರೆಸ್ಟೊರೆಂಟ್‌ಗಳ ಸರಣಿಯಾಗಿ ವಿಸ್ತರಣೆಗೊಂಡು ಗುಣಮಟ್ಟದ, ಸ್ವಚ್ಛತೆಯ ವಾತವರಣದೊಂದಿಗೆ ಜನಪ್ರೀಯತೆಯನ್ನು ಪಡೆದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News