ಪಿಎಫ್‌ಐನಿಂದ ಸಾರ್ವಜನಿಕ ಸಭೆ

Update: 2017-05-22 16:09 GMT

ಮಂಗಳೂರು, ಮೇ 22: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ವಲಯ ವತಿಯಿಂದ ‘ದೇಶದಲ್ಲಿ ಮುಸ್ಲಿಮರ ಸ್ಥಿತಿಗತಿ ಮತ್ತು ಪಾಪ್ಯುಲರ್ ಫ್ರೆಂಟ್‌ನ ಪ್ರಸಕ್ತತೆ’ ಕುರಿತು ಸಾರ್ವಜನಿಕ ಕಾರ್ಯಕ್ರಮವು ಬಜ್ಪೆ ಸಮೀಪದ ಪೆರ್ಮುದೆಯಲ್ಲಿರುವ ರಯ್ಯೆನ್ ಸಭಾಂಗಣದಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಪಾಪ್ಯುಲರ್ ಫ್ರಂಟ್ ನ ರಾಜ್ಯ ಸಮಿತಿಯ ಸದಸ್ಯ ಶಾಫಿ ಬೆಳ್ಳಾರೆ ಮಾತನಾಡಿ, ಈ ದೇಶದಲ್ಲಿ ಮುಸ್ಲಿಂ ಸಮುದಾಯವನ್ನು ನಿರಂತರ ಗುರಿಪಡಿಸುತ್ತಾ ಅಭದ್ರತೆಯ ವಾತಾವರಣವನ್ನು ನಿರ್ಮಿಸಲಾಗಿದ್ದು, ಸ್ವಾತಂತ್ರ ನಂತರದಲ್ಲಿ ಈ ರೀತಿಯ ಶೋಷಣೆ ಮಾಡಿದವರೇ ಇಂದು ದೇಶವನ್ನು ಆಳುತ್ತಿದ್ದಾರೆ ಎಂದರು.

ಕಳೆದ 70 ವರ್ಷಗಳಿಂದ ಅಧಿಕಾರವನ್ನು ಅನುಭವಿಸಿ ಮುಸ್ಲಿಮರನ್ನು ಕೇವಲ ವೋಟ್‌ ಬ್ಯಾಂಕ್‌ಗಳನ್ನಾಗಿ ಸೀಮಿತಗೊಳಿಸಿದ ರಾಜಕೀಯ ಪಕ್ಷಗಳು ಇಂದು ಮುಸ್ಲಿಮರಿಗೆ ನ್ಯಾಯ ತಲುಪಿಸಿ ಕೊಡುವಲ್ಲಿ ವಿಫಲವಾಗಿದೆ. ಸಮುದಾಯವು ನ್ಯಾಯಕ್ಕಾಗಿ, ಹಕ್ಕುಗಳಿಗಾಗಿ ಐಕ್ಯತೆಯೊಂದಿಗೆ ಸ್ವಯಂ ಹೋರಾಟದ ರಂಗಕ್ಕಿಳಿಯಬೇಕಾಗಿದ್ದು ಇದರ ಅನಿವಾರ್ಯತೆಯನ್ನು ಮನಗಂಡು ಪಾಪ್ಯುಲರ್ ಫ್ರಂಟ್ ಹೋರಾಟದ ಮುಂಚೂಣಿಯಲ್ಲಿ ನೇತೃತ್ವವನ್ನು ನೀಡುತ್ತಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ನ ಜಿಲ್ಲಾ ಕಾರ್ಯದರ್ಶಿ ಎ.ಕೆ.ಅಶ್ರಫ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೂರಕಂಬ್ಲ ಖ್ವಾಜಾ ಜಾಮಿಯಾ ಮಸ್ಜಿದ್ ಅಧ್ಯಕ್ಷ ಎಸ್.ಎಂ.ಅನ್ವರ್, ಪೆರ್ಮುದೆ ಜಾಮಿಯಾ ಮಸೀದಿ ಅಧ್ಯಕ್ಷ ನೂರ್ ಮುಹಮ್ಮದ್, ಯುಸ್ರಾ ಡಿಯೋಗ್ನಾಸ್ಟಿಕ್ ಸೆಂಟರ್‌ನ ಇಫ್ತಿಕಾರ್, ಹಿರಿಯರಾದ ಮೊದಿನ್ ಸಾಹೆಬ್, ಗ್ರಾಮ ಪಂಚಾಯತ್ ಸದಸ್ಯ ನಝೀರ್ ಬಜ್ಪೆ, ಮೊದಿನ್ ಭಟ್ರಕೆರೆ ಉಪಸ್ಥಿತರಿದ್ದರು.

ಇಸ್ಮಾಯಿಲ್ ಇಂಜಿನಿಯರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News