ಹೆಣ್ಮಕ್ಕಳ ಹೆತ್ತವರಿಗೆ ಆಶಾವಾದ ಮೂಡಿಸುವುದು ಶ್ರೇಷ್ಟ ಕಾರ್ಯ- ಕೆ.ಆರ್. ಹುಸೈನ್ ದಾರಿಮಿ

Update: 2017-05-22 18:15 GMT

ಪುತ್ತೂರು, ಮೇ 22: ವರ್ಷ ಮೂವತ್ತು ದಾಟಿಯೂ ಮದುವೆಯಾಗದೇ ಉಳಿದಿರುವ ಹೆಣ್ಮಕ್ಕಳ ಬಗ್ಗೆ ಚಿಂತನೆ ನಡೆಸುವ ಮೂಲಕ ಅವರ ಕಣ್ಣೀರೊರೆಸುವ ಕಾರ್ಯ ನಮ್ಮಿಂದಾಗಬೇಕು, ಅಸಹಾಯಕ ಹೆಣ್ಮಕ್ಕಳ ಹಾಗೂ ಅವರ ಹೆತ್ತವರ ಬಾಳಿನಲ್ಲಿ ಹೊಸ ಆಶಾವಾದ ಮೂಡಿಸುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ ಎಂದು ರೆಂಜಲಾಡಿ ಮಸೀದಿಯ ಅಧ್ಯಕ್ಷ ಕೆ.ಆರ್. ಹುಸೈನ್ ದಾರಿಮಿ ಹೇಳಿದರು.

ಅವರು ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಂಸ್ಥೆ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ನಂಡೆ ಪೆಂಙಳ್ ಅಭಿಯಾನ ಅಂಗವಾರಿ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ರೆಂಜಲಾಡಿ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ  ನಡೆದ ನಂಡೆ ಪೆಂಙಳ್ ಅಭಿಯಾನದಲ್ಲಿ ಮಾತನಾಡಿ ಈ ಅಭಿಯಾನದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕಾದ ಅಗತ್ಯವಿದೆ ಎಂದರು.

ಟಿಆರ್‌ಎಫ್‌ನ ರಫೀಕ್ ಮಾಸ್ತರ್ ಪ್ರಾಜೆಕ್ಟರ್ ಮೂಲಕ ’ನಂಡೆ ಪೆಂಙಳ್’ ಅಭಿಯಾನದ ಅನಿವಾರ್ಯತೆ, ಜಿಲ್ಲೆಯಾದ್ಯಂತ 30 ವರ್ಷ ದಾಟಿಯೂ ವಿವಿಧ ಕಾರಣಗಳಿಂದಾಗಿ ವಿವಾಹಭಾಗ್ಯ ಕಾಣದೇ ಮನೆಯಲ್ಲಿ ಕಣ್ಣೀರು ಸುರಿಸುತ್ತಿರುವ ಹೆಣ್ಮಕ್ಕಳ ಅಂಕಿ ಅಂಶ ಮತ್ತು ಚಿತ್ರಣ, ಮದುವೆಯಾಗದೇ ಉಳಿಯುವುದರಿಂದ ಉಂಟಾಗುವ ದುಷ್ಪರಿಣಾಮಗಳೇನು ಮತ್ತು ಅದಕ್ಕಿರುವ ಪರಿಹಾರೋಪಾಯಗಳೇನು ಎಂಬುವುದರ ಕುರಿತು ಮಾಹಿತಿ ನೀಡಿದರು.

ನೌಶಾದ್ ಹಾಜಿ ಸೂರಲ್ಪಾಡಿ ಮಾತನಾಡಿ ಸಮುದಾಯದಲ್ಲಿರುವ ವಿವಾಹ ವಂಚಿತ ಸಹೋದರಿಯರ ಬಗ್ಗೆ ನಾವು ಚಿಂತಿಸದೇ ಹೋದಲ್ಲಿ ನಾಳೆ ಪಾರತ್ರಿಕ ಲೋಕದಲ್ಲಿ ನಮಗೆ ವಿಜಯಿಯಾಗಲು ಸಾಧ್ಯವಿಲ್ಲ, ಸಮಾಜದ ಕಟ್ಟಕಡೆಯ ಹೆಣ್ಮಕ್ಕಳಿಗೂ ಮದುವೆ ಭಾಗ್ಯ ಕರುಣಿಸುವುದು ಸಮುದಾಯದ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
 

ವೇದಿಕೆಯಲ್ಲಿ ದ.ಕ ಜಿಲ್ಲಾ ವಖ್ಫ್ ಸಲಹಾ ಸಮಿತಿಯ ಸದಸ್ಯ ಪಿ.ಬಿ ಹಸನ್ ಹಾಜಿ ಯುನಿಟಿ,ಅಬ್ದುಲ್ ಹಮೀದ್ ಕಣ್ಣೂರು ಕಲ್ಲೇಗ ಮಸೀದಿ ಅಧ್ಯಕ್ಷ ಶುಕೂರ್ ಹಾಜಿ, ಅಬ್ದುಲ್ ಮಜೀದ್ ಹಾಜಿ ಸಿತಾರ್, ನಸೀಮ್ ಹಾಜಿ, ಸ್ಥಳೀಯ ಖತೀಬ್ ಅಬೂಬಕ್ಕರ್ ಸಹದಿ, ಅಬ್ದುಲ್ ರಹ್‌ಮಾನ್ ಹಾಜಿ ರೆಂಜಲಾಡಿ ಉಪಸ್ಥಿತರಿದ್ದರು.ಕೆ.ಎಂ ಹನೀಫ್ ರೆಂಜಲಾಡಿ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News