ತೆರಿಗೆ ವಂಚಿಸಿ ಕೋಳಿ ಸಾಗಾಟ: ಲಾರಿ ವಶ

Update: 2017-05-22 18:26 GMT

ಮಂಜೇಶ್ವರ, ಮೇ 22: ತೆರಿಗೆ ಪಾವತಿಸದೆ ಕೋಳಿ ಸಾಗಿಸುತ್ತಿದ್ದ ಲಾರಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿದ್ದಾರೆ.

ಕರ್ನಾಟಕದಿಂದ ಕಾಸರಗೋಡು ಭಾಗಕ್ಕೆ ಸಾಗುತ್ತಿದ್ದ ಕೇರಳ ನೋಂದಾವಣೆಯ ಲಾರಿಯನ್ನು ಸೋಮವಾರ ಮುಂಜಾನೆ 3 ಗಂಟೆಗೆ ಮಂಜೇಶ್ವರ ಎಎಸ್‌ಐ ಜೋಸ್ ನೇತೃತ್ವದ ಪೊಲೀಸರು ವಶಪಡಿಸಿದ್ದಾರೆ.

ಮೀಯಪದವು- ಚಿಗುರುಪಾದೆ ಮಧ್ಯೆ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಕೋಳಿ ಲಾರಿ ಆಗಮಿಸಿದೆ. ಕಾರ್ಯಾಚರಣೆ ವೇಳೆ ಲಾರಿ ಚಾಲಕ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸುಮಾರು 1,300 ಕೋಳಿಗಳನ್ನು ತುಂಬಿಸಲಾಗಿತ್ತು. ಲಾರಿ ಹಾಗೂ ಕೋಳಿಯನ್ನು ಮಾರಾಟ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News