ತೆಂಕಮಿಜಾರಿನಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

Update: 2017-05-23 12:09 GMT

ಮೂಡುಬಿದಿರೆ, ಮೇ 23: ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1.50 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಶಾಸಕ ಕೆ. ಅಭಯಚಂದ್ರ ಜೈನ್ ಚಾಲನೆ ನೀಡಿದರು.

ತೆಂಕಮಿಜಾರು ಗ್ರಾಮದ ಗುಂಡೀರು ಕೊರಗರ ಕಾಲನಿಯಲ್ಲಿ ಸುಮಾರು 25 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಾಂಕೀಟ್ ರಸ್ತೆಯನ್ನು ಉದ್ಘಾಟಿಸಲಾಯಿತು.

ಬಡಗಮಿಜಾರು ಗ್ರಾಮದ ಹಲೇರಿಕಿಂಡಿ  ಅಣೆಕಟ್ಟು ನಿರ್ಮಾಣಕ್ಕಾಗಿ 45 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ, ಶಾಂತಿಗಿರಿ ಬೊಳ್ಳೊಟ್ಟು ಕಿಂಡಿ ಅಣೆಕಟ್ಟು ನಿರ್ಮಾಣಕ್ಕಾಗಿ 50 ಲಕ್ಷ ರೂ.ಗಳ ಕಾಮಗಾರಿ, ಬಡಗ ಮಿಜಾರು ಗ್ರಾಮದ ಮರಕಡ ಪ.ಜಾತಿ ಮತ್ತು ಪ.ಪಂಗಡ ಕಾಲನಿಗೆ 10 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟಿಕರಣಕ್ಕಾಗಿ ಚಾಲನೆ ನೀಡಲಾಯಿತು.

ಬಡಗ ಮಿಜಾರು ಗ್ರಾಮದ ಮುದ್ರ ಬೆಟ್ಟು ಸುಬ್ರಮಣ್ಯ ಭಟ್ ಮನೆ ಸಮೀಪ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ  5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟನ್ನು ಉದ್ಘಾಟಿಸಲಾಯಿತು.

ಸಮಾರಂಭದಲ್ಲಿ ಪಂ.ಅಧ್ಯಕ್ಷರಾದ ಬಾಲಕೃಷ್ಣ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಪ್ರಕಾಶ್‌ಗೌಡ, ಗ್ರಾಮ ಪಂಚಾಯತ್  ಸದಸ್ಯ ರಮೇಶ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಕರುಣಾಕರ ಶೆಟ್ಟಿ, ಜೆ.ಕೆ ಹಸನಬ್ಬ,ಉಮೇಶ್ ಶೆಟ್ಟಿ, ದಿನೇಶ್ ಪೂಜಾರಿ ಮತ್ತು ಲಕ್ಷ್ಮೀ ಉಪಸ್ಥಿತರಿದ್ದರು.

ಗ್ರಾಮಸ್ಥರಾದ ಅಬ್ದುಲ್ ಲತೀಫ್, ಡಿ.ಎ.ಉಸ್ಮಾನ್, ಮುಹಮ್ಮದ್ ಲತೀಫ್, ಮುಹಮ್ಮದ್ ರಹ್ಮಾನ್ ಹಾಗೂ ಇತರರು ಭಾಗವಹಿಸಿದ್ದರು. ಪಿ.ಡಿ.ಒ ಸಾಯೀಶ್‌ ಚೌಟ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News