ಉಳ್ಳಾಲ: ಸಮುದ್ರ ಪಾಲಾಗುತ್ತಿದ್ದ ನಾಲ್ವರ ರಕ್ಷಣೆ

Update: 2017-05-23 12:45 GMT

ಉಳ್ಳಾಲ, ಮೇ 23: ಬೆಂಗಳೂರು ಮೂಲದ ಕುಟುಂಬವೊಂದು ಉಳ್ಳಾಲ ದರ್ಗಾಕ್ಕೆಂದು ಭೇಟಿ ನೀಡಿ ನಂತರ ಉಳ್ಳಾಲ ಸಮುದ್ರ ತೀರಕ್ಕೆ ತೆರಳಿದ್ದು ಈ ಸಂದರ್ಭ ಸಮುದ್ರದ ಅಲೆಗಳಿಗೆ ಸಿಲುಕಿ ನಾಲ್ವರು ಸಮುದ್ರ ಪಾಲಾಗುತ್ತಿದ್ದುದನ್ನು ಕಂಡ ಸ್ಥಳೀಯ ಶಿವಾಜಿ ಈಜು ರಕ್ಷಕ ಮತ್ತು ಜೀವ ರಕ್ಷಕ ದಳದವರು ರಕ್ಷಿಸಿ, ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರು ನೀಲಸಂದ್ರ ನಿವಾಸಿ ರಹಿಮಾನುಲ್ಲಾ (27), ಅವರ ಪತ್ನಿ, ಮೂವರು ಮಕ್ಕಳು ಮತ್ತು ನಾದಿನಿ ಜೊತೆ ಇಂದು ಮುಂಜಾನೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿ ನಂತರ ಉಳ್ಳಾಲ ಮೊಗವೀರ ಪಟ್ಣದ ಸಮುದ್ರ ಕಿನಾರೆಗೆ ತೆರಳಿದ್ದಾರೆ.

ಸಮುದ್ರ ಕಿನಾರೆಯಲ್ಲಿ ರಹಿಮಾನುಲ್ಲಾ ಅವರ ಗಂಡು ಮಗುವೊಂದು ನೀರಿನಲ್ಲಿ ಆಟಕ್ಕಿಳಿದಿದ್ದು ಬೃಹತ್ ಅಲೆಗಳು ಮಗುವನ್ನು ಕೊಚ್ಚಿಕೊಂಡು ಹೋಗಿದೆ. ಇದನ್ನು ಕಂಡ ರಹಿಮಾನುಲ್ಲಾ, ಪತ್ನಿ ಯಾಸ್ಮಿನ್ ತಾಜ್ (22) ಮತ್ತು ಯಾಸ್ಮಿನ್ ಸಹೋದರಿ ತಸ್ಮಿಯಾ ತಾಜ್ (16) ಮಗುವನ್ನು ರಕ್ಷಿಸಲು ನೀರಿಗೆ ಧುಮುಕಿದ್ದು ನಾಲ್ವರು ಸಮುದ್ರ ಪಾಲಾಗುತ್ತಿದ್ದುದನ್ನು ಕಂಡ ಸ್ಥಳೀಯ ಈಜುಗಾರರು ಕೂಡಲೇ ಸಹಾಯಕ್ಕೆ ಧಾವಿಸಿ ಎಲ್ಲರ ಪ್ರಾಣ ರಕ್ಷಿಸಿದ್ದಾರೆ.

ಸಮುದ್ರ ಪಾಲಾಗಿ ರಕ್ಷಸಿಲ್ಪಟ್ಟ ರಹಿಮಾನುಲ್ಲಾ, ಯಾಸ್ಮಿನ್ ತಾಜ್, ತಸ್ಮಿಯಾ ತಾಜ್‌ಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾ ಗಿದ್ದು,ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News