×
Ad

ಈ ಗ್ರಾಮದಲ್ಲಿನ 1,000 ಮಂದಿಯ ಜನ್ಮದಿನಾಂಕ ಜನವರಿ 1!

Update: 2017-05-23 18:19 IST

ಅಲಹಾಬಾದ್, ಮೇ 23: ಇಲ್ಲಿನ ಕಂಜಾಸ ಗ್ರಾಮದ ಜನರು ಒಂದು ವಿಶೇಷತೆಗಾಗಿ ಇತ್ತೀಚೆಗೆ ಸುದ್ದಿಯಾಗಿದ್ದಾರೆ. ಈ  ಗ್ರಾಮದಲ್ಲಿನ ಸುಮಾರು 1000 ಮಂದಿ ಜನಿಸಿದ್ದು, ಒಂದೇ ದಿನ ಅಂದರೆ ಜನವರಿ 1ರಂದು. ಆದರೆ ಇದನ್ನು ಇಲ್ಲಿನ ಗ್ರಾಮಸ್ಥರು ಒಪ್ಪುವುದಿಲ್ಲ. ಏಕೆಂದರೆ ನಿಜವಾಗಿಯೂ ಇಂತಹ ಅಚ್ಚರಿ ನಡೆದಿಲ್ಲವಾದರೂ, ಆಧಾರ್ ಕೇಂದ್ರದ ಯಂತ್ರದ ಎಡವಟ್ಟು ಈ ಸಮಸ್ಯೆಯನ್ನು ಹುಟ್ಟುಹಾಕಿದೆ.

ಕಂಜಾಸದ ಪ್ರತಿ ಐವರಲ್ಲಿ ಓರ್ವನ ಜನ್ಮ ದಿನಾಂಕ ಜನವರಿ ಒಂದು ಎಂದು ಆಧಾರ್ ಕಾರ್ಡ್ ಗಳಲ್ಲಿ ನಮೂದಿಸಲ್ಪಟ್ಟಿದೆ. ಆಧಾರ್ ಕಾರ್ಡ್ ನಲ್ಲಿ ನಮ್ಮ ನಿಜವಾದ ಜನ್ಮ ದಿನಾಂಕವನ್ನು ನಮೂದಿಸಿಲ್ಲ ಎಂದು ಹಲವಾರು ದೂರುಗಳು ಬಂದ ಮೇಲೆ ಎಚ್ಚೆತ್ತುಕೊಂಡ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿದ್ದಾರೆ.

“ಸುಮಾರು 1000 ( 5000 ಜನರಲ್ಲಿ) ಗ್ರಾಮಸ್ಥರು ತಮ್ಮ ಜನ್ಮ ದಿನಾಂಕ ಸರಿಯಿಲ್ಲವೆಂದು ದೂರು ನೀಡಿದ್ದರು. ಆದರೆ ಆಶ್ಚರ್ಯಕಾರಿ ಸಂಗತಿಯೆಂದರೆ ಎಲ್ಲರ ಜನ್ಮದಿನಾಂಕವೂ ಜನವರಿ 1 ಎನ್ನುವುದಾಗಿತ್ತು” ಎಂದು ಬ್ಲಾಕ್ ಡೆವಲಪ್ ಮೆಂಟ್ ಆಫಿಸರ್ ನೀರಜ್ ದುಬೆ ಹೇಳಿದ್ದಾರೆ.

“ಪ್ರಕರಣದ ತನಿಖೆ ನಡೆದು ವ್ಯವಸ್ಥೆ ಸರಿಪಡಿಸಿದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜನ್ಮ ದಿನಾಂಕ ತಪ್ಪಾಗಿ ನಮೂದಿಸಲ್ಪಟ್ಟ ಆಧಾರ್ ಕಾರ್ಡ್ ಗಳನ್ನು ಪಡೆದು ಮರುವಿತರಣೆ ಮಾಡಲಾಗುವುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News