ಪಲ್ಟಿಯಾಗಿದ್ದ ಕ್ಯಾಂಟರ್ ಗೆ ಢಿಕ್ಕಿಯಾದ ಟ್ರಕ್: ಐವರು ಮೃತ್ಯು
Update: 2017-05-23 19:23 IST
ಪಾಣಿಪತ್, ಮೇ 23: ಟಯರ್ ಸ್ಫೋಟಗೊಂಡು ರಸ್ತೆ ಮಧ್ಯೆ ನಿಂತಿದ್ದ ಲಾರಿಯೊಂದಕ್ಕೆ ಹಿಂದಿನಿಂದ ಬಂದ ಟ್ರಕ್ಕೊಂದು ಢಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟ ಘಟನೆ ಪಾಣಿಪತ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಜಿತೇಂದ್ರ ಸಿಂಗ್ (28), ಕುಲದೀಪ್ ಸಿಂಗ್ (26), ಕುಂದನ್ ಸಿಂಗ್ (45), ಕಮಲ್ ಹಾಗೂ ಕಮಲೇಶ್ ಎಂದು ಗುರುತಿಸಲಾಗಿದೆ.
“ದಾಳಿಂಬೆ ಲೋಡನ್ನು ಸಾಗಿಸುತ್ತಿದ್ದ ಕ್ಯಾಂಟರೊಂದು ಟಯರ್ ಸ್ಫೋಟಗೊಂಡ ಪರಿಣಾಮ ದಿಲ್ಲಿ-ಹಿಮಾಚಲ ರಸ್ತೆಯಲ್ಲಿ ಪಲ್ಟಿಯಾಗಿತ್ತು. ಈ ಸಂದರ್ಭ ಅಲ್ಲಿದ್ದ ಸ್ಥಳೀಯರು ಕ್ಯಾಂಟರ್ ನಲ್ಲಿ ಸಿಲುಕಿಕೊಂಡಿದ್ದ ಚಾಲಕ ಹಾಗೂ ಕ್ಲೀನರನ್ನು ಹೊರತೆಗೆಯಲು ಪ್ರಯತ್ನಿಸಿದ್ದು, ಇದೇ ಸಂದರ್ಭ ವೇಗವಾಗಿ ಬಂದ ಟ್ರಕ್ಕೊಂದು ಕ್ಯಾಂಟರ್ ಗೆ ಢಿಕ್ಕಿ ಹೊಡೆದಿದ್ದು, ಚಾಲಕ ಹಾಗೂ ಕ್ಲೀನರ್ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಪಾಣಿಪತ್ ಡಿಎಸ್ಪಿ ಜಗದೀಪ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.