×
Ad

ಇವಿಎಂ ಸವಾಲಿಗೆ ಎಲ್ಲ ಮಾನ್ಯತೆ ಪಡೆದ ಪಕ್ಷಗಳಿಗೆ ಆಹ್ವಾನ

Update: 2017-05-23 21:10 IST

ಹೊಸದಿಲ್ಲಿ,ಮೇ 23: ತನ್ನ ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಲು ಸಾಧ್ಯ ಎನ್ನುವು ದನ್ನು ರುಜುವಾತುಗೊಳಿಸುವಂತೆ ಸವಾಲೊಡ್ಡಿರುವ ಚುನಾವಣಾ ಆಯೋಗವು ಅದಕ್ಕಾಗಿ ಎಲ್ಲ ಏಳು ರಾಷ್ಟ್ರೀಯ ಪಕ್ಷಗಳು ಮತ್ತು 49 ಪ್ರಾದೇಶಿಕ ಪಕ್ಷಗಳನ್ನು ಆಹ್ವಾನಿಸಿದೆ.

ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಎಲ್ಲ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳನ್ನು ಸವಾಲಿಗೆ ಆಹ್ವಾನಿಸುವುದಾಗಿ ಆಯೋಗವು ಈ ಮೊದಲು ಹೇಳಿತ್ತು. ಈ ಪೈಕಿ ಕೆಲವು ಪಕ್ಷಗಳು ಇವಿಎಂಗಳನ್ನು ತಿರುಚಲಾಗಿತ್ತು ಎಂದು ಆರೋಪಿಸಿದ್ದವು. ಇದೀಗ ಆಯೋಗವು ಎಲ್ಲ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳಿಗೆ ಆಹ್ವಾನಗಳನ್ನು ಕಳುಹಿಸಿದೆ.

ಸವಾಲಿನಲ್ಲಿ ಭಾಗವಹಿಸುವ ಪ್ರತಿಯೊಂದು ಪಕ್ಷಕ್ಕೂ ಇತ್ತೀಚಿಗೆ ಚುನಾವಣೆ ನಡೆದಿದ್ದ ಐದು ರಾಜ್ಯಗಳ ಪೈಕಿ ಅದರ ಆಯ್ಕೆಯ ರಾಜ್ಯದಲ್ಲಿ ಬಳಸಲಾಗಿದ್ದ ನಾಲ್ಕು ಇವಿಎಂಗಳನ್ನು ಒದಗಿಸಲಾಗುವುದು. ಪ್ರತಿ ತಂಡವೂ ಗರಿಷ್ಠ ಮೂವರು ಸದಸ್ಯರನ್ನು ಹೊಂದಿರಬಹುದಾಗಿದೆ. ಆದರೆ ವಿದೇಶಿ ತಜ್ಞರು ಪಾಲ್ಗೊಳ್ಳುವುದನ್ನು ನಿಷೇಧಿಸಲಾಗಿದೆ.

ಸವಾಲು ಜೂನ್ 3ರಿಂದ ಆರಂಭಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News