×
Ad

ರಕ್ತದಾನಿಗಳಿಗೆ ಸೂಚನೆ

Update: 2017-05-23 21:46 IST

ಉಡುಪಿ, ಮೇ 23: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ಎ,ಬಿ,ಒ ರಕ್ತದ ಗುಂಪುಗಳನ್ನು ಕಂಡುಹಿಡಿದ ಡಾ. ಕಾರ್ಲ್ ಲ್ಯಾಂಡ್ ಸ್ಟೇನಿಯರ್ ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷದಂತೆ ಜೂ.14ರಂದು ಆಚರಿಸಲಿದೆ.
ಈ ಸಂದರ್ಭದಲ್ಲಿ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೇ ಇನ್ನೊಬ್ಬರಿಗೆ ಅಮೂಲ್ಯವಾದ ಜೀವವನ್ನು ನೀಡಬೇಕೆಂಬ ಉದ್ದೇಶವನ್ನು ಇಟ್ಟುಕೊಂಡು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ರಕ್ತದಾನಿಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಈ ವರ್ಷದ ಜೂ.14ರಂದು ಇಂಥ ರಕ್ತದಾನಿಗಳನ್ನು ಗುರುತಿಸಿ ಗೌರವಿಸಲು ಹಾಗೂ ಪ್ರೋತ್ಸಾಹಿಸಲು ನಿರ್ಧರಿಸಲಾಗಿದ್ದು, 25ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳ ಹೆಸರನ್ನು ಜಿಲ್ಲಾ ಶಾಖೆಯಿಂದ ದೃಡೀಕರಿಸಿ ಬೆಂಗಳೂರು ಶಾಖೆಗೆ ಕಳುಹಿಸಿ ಆಯ್ಕೆಯಾದ ದಾನಿಗಳನ್ನು ಗೌರವಿಸಲಾಗುವುದು. ಆದ್ದರಿಂದ ಕನಿಷ್ಠ 25 ಬಾರಿಗೂ ಮೇಲ್ಪಟ್ಟು ರಕ್ತದಾನ ಮಾಡಿರುವ ದಾನಿಗಳು ರಕ್ತದಾನ ಮಾಡಿರುವ ಬಗ್ಗೆ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ರೆಡ್‌ಕ್ರಾಸ್ ಭವನ, ಅಜ್ಜರಕಾಡು, ಉಡುಪಿ - 576101 ಈ ವಿಳಾಸಕ್ಕೆ ಕಳುಹಿಸುವಂತೆ ಕೋರಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ:0820-2532222ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News