ಮನೆಗೆ ನುಗ್ಗಿ ಸೊತ್ತು ಕಳವು
Update: 2017-05-23 21:56 IST
ಕುಂದಾಪುರ, ಮೇ 23: ಹಂಗಳೂರು ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಪಾರ ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಹಂಗಳೂರಿನ ಶರೀನ್ ಎಸ್.ಹೆಗ್ಡೆ ಎಂಬವರ ಮನೆಯ ಎದುರು ಬಾಗಿಲಿನ ಇಂಟರ್‌ಲಾಕ್ ಮುರಿದು ಒಳನುಗ್ಗಿದ ಕಳ್ಳರು, ಕೋಣೆಯಲ್ಲಿನ ಗೋದ್ರೇಜ್ ಬಾಗಿಲು ಒಡೆದು ಅದರಲ್ಲಿದ್ದ ಎರಡು ಜೊತೆ ವಜ್ರದ ಕಿವಿಯ ಟಿಕ್ಕಿಗಳು, ಒಂದು ಜೊತೆ ಹವಳದ ಕಿವಿಯ ಟಿಕ್ಕಿಗಳು, ಬೆಳ್ಳಿಯ ಕಾಲು ದೀಪಗಳು ಹಾಗೂ 5,000ರೂ. ನಗದು ಮತ್ತು ಶರೀನ್ ಹೆಗ್ಡೆ ಅವರ ಬಸ್‌ನ ಆರ್.ಸಿ. ಪುಸ್ತಕ, ಇನ್ಸುರೆನ್ಸ್ ಪತ್ರ ಮತ್ತು ಪಾಸಿಂಗ್ ಚೀಟಿಯನ್ನು ಕಳವು ಮಾಡಲಾಗಿದೆ. ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.