×
Ad

​ನದಿಗೆ ಬಿದ್ದು ಯುವಕ ಮೃತ್ಯು

Update: 2017-05-23 22:00 IST

ಮಲ್ಪೆ, ಮೇ 23: ಹೂಡೆ ಗುಡ್ಡೇರಿ ಕಂಬಳದಲ್ಲಿರುವ ಸ್ವರ್ಣ ನದಿಗೆ ಯುವಕನೋರ್ವ  ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
 

ಮೃತರನ್ನು ಸತೀಶ್ (32) ಎಂದು ಗುರುತಿಸಲಾಗಿದೆ.

ಇವರನ್ನು ಮೇ 21 ರಂದು ಸಂಜೆ ಅವರ ಸಂಬಂಧಿಕರು ಕೆಮ್ಮಣ್ಣುನಲ್ಲಿ ನೋಡಿದ್ದು, ಮರುದಿನ ಬೆಳಗ್ಗೆ ಆತನ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಈ ಮಧ್ಯೆ ಅವಧಿಯಲ್ಲಿ ಸತೀಶ್ ಆಕಸ್ಮಿಕವಾಗಿ ನದಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News