ರಂಝಾನ್ ಕಿಟ್ ವಿತರಣೆ

Update: 2017-05-23 18:25 GMT

ಉಡುಪಿ, ಮೇ 23: ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ದಾನಿಗಳ ಸಹಕಾರದೊಂದಿಗೆ ತಾಲೂಕಿನ ಆರ್ಥಿಕವಾಗಿ ಹಿಂದು ಳಿದಿರುವ 60 ಬಡ ಕುಟುಂಬಗಳಿಗೆ ರಂಝಾನ್ ಕಿಟ್‌ನ್ನು ವಿತರಿಸಲಾಯಿತು.

ಮಂಗಳವಾರ ಉಡುಪಿಯ ಇಂದಿರಾನಗರದಲ್ಲಿರುವ ಮೂರು ಕುಟುಂಬಗಳಿಗೆ ಸಾಂಕೇತಿಕವಾಗಿ ಕಿಟ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಗಫೂರ್ ಕಲ್ಯಾಣಪುರ, ಕಾರ್ಯದರ್ಶಿ ರಿಯಾಝ್ ಅಹ್ಮದ್, ಇಬ್ರಾಹಿಂ ಹುಸೇನ್, ತಬ್ರೇಝ್, ಗುಲಾಂ ರವೂಫ್ ಮೊದಲಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News