×
Ad

ನಾಯರ್ಮೂಲೆ ಫ್ಯಾಮಿಲಿ ಕಸಿನ್ಸ್ ವತಿಯಿಂದ 35 ಮಂದಿಗೆ ಕನ್ನಡಕ ವಿತರಣೆ

Update: 2017-05-24 13:03 IST

ಬಂಟ್ವಾಳ, ಮೇ 24: ನಾಯರ್ಮೂಲೆ ಫ್ಯಾಮಿಲಿ ಕಸಿನ್ಸ್ ವತಿಯಿಂದ ಮಾಣಿಲ ಗ್ರಾಮದ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು. 

ನಾಯರ್ಮೂಲೆ ಫ್ಯಾಮಿಲಿ ಕಸಿನ್ಸ್ ವತಿಯಿಂದ ಇತ್ತೀಚೆಗೆ ನಡೆಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಣ್ಣಿನ ಪರೀಕ್ಷೆಯನ್ನು‌ ಮಾಡಿದ ನಾಯರ್ಮೂಲೆ ಕುಟುಂಬದ ಕಣ್ಣಿನ ತಜ್ಞ ವೈದ್ಯೆ ಡಾ.ತಾಹಿರಾ ಸಿದ್ದೀಕ್ ಸುಮಾರು 35 ಮಂದಿಗೆ ಕನ್ನಡಕದ ಸಲಹೆ ನೀಡಿದ್ದರು. ಆ ಪ್ರಕಾರ ತಯಾರಿಸಿದ ಕನ್ನಡಕವನ್ನು ಮುಹಮ್ಮದ್ ಹಾಜಿ, ಕಾಯಿಞಿ ಹಾಜಿ, ಇಬ್ರಾಹಿಂ ಹಾಜಿ, ಜಸ್ಟೀಸ್ ಮೂಸಕುಂಞಿ, ಖದೀಜಮ್ಮ ಮೂಸಕುಂಞಿ, ಡಾ.ಬದ್ರುದೀನ್, ಡಾ‌.ಬಶೀರ್, ರಝಾಕ್, ಇಬ್ರಾಹಿಂ ಕರೀಮ್, ಮುಸ್ತಫ, ಶಬೀರ್ ಮದನೋಡಿ, ಶಹನಾಝ್,  ನಾಸಿರ್ ನಾಯರ್ಮೂಲೆ ಮುಂತಾದವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News