×
Ad

ಮಂಗಳೂರು: 2.5 ಲಕ್ಷ ಮೌಲ್ಯದ 5 ಕೆಜಿ ಗಾಂಜಾ; ಇಬ್ಬರ ಬಂಧನ

Update: 2017-05-24 18:19 IST

ಮಂಗಳೂರು, ಮೇ 24: ಒಡಿಶಾದಿಂದ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಮೊಬೈಲ್ , ನಗದು ವಶಪಡಿಸಿಕೊಂಡಿದ್ದಾರೆ.

ನಗರದ ಮಂಗಳಾ ಕ್ರೀಡಾಂಗಣದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಒಡಿಶಾದ ಶಾಂತನುಕುಮಾರ್ ಶಾಹು (20) ಹಾಗೂ ಪಣಂಬೂರು ಮೀನಕಳಿಯದ ವಿಕ್ರಮ್ (27) ಎಂಬವರನ್ನು ಬಂಧಿಸಲಾಗಿದೆ. 2.5 ಲಕ್ಷ ಮೌಲ್ಯದ 5 ಕೆಜಿ ಗಾಂಜಾ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News