×
Ad

ದುಬೈ: 1,014 ಕೈದಿಗಳ ಬಿಡುಗಡೆ

Update: 2017-05-24 18:41 IST

ದುಬೈ, ಮೇ 24: ರಮಝಾನ್‌ಗೆ ಪೂರ್ವಭಾವಿಯಾಗಿ ದುಬೈಯ ಜೈಲುಗಳಲ್ಲಿರುವ ವಿವಿಧ ದೇಶಗಳ 1,014 ಕೈದಿಗಳನ್ನು ಬಿಡುಗಡೆ ಮಾಡುವಂತೆ ಯುಎಇಯ ಉಪಾಧ್ಯಕ್ಷ ಹಾಗೂ ಪ್ರಧಾನಿ ಮತ್ತು ದುಬೈಯ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಆದೇಶ ನೀಡಿದ್ದಾರೆ.

ಕೈದಿಗಳನ್ನು ಕ್ಷಮಿಸಲು ದುಬೈ ಆಡಳಿತಗಾರ ತೆಗೆದುಕೊಂಡ ನಿರ್ಧಾರವು ಅವರ ಕುಟುಂಬಿಕರಿಗೆ ಸಂತೋಷ ತರುತ್ತದೆ ಹಾಗೂ ಕೈದಿಗಳಿಗೆ ಹೊಸ ಜೀವನವನ್ನು ಆರಂಭಿಸಲು ಅವಕಾಶ ನೀಡುತ್ತದೆ ಎಂದು ದುಬೈ ಅಟಾರ್ನಿ ಜನರಲ್ ಎಸ್ಸಾಮ್ ಐಸಾ ಅಲ್ ಹುಮೈದಾನ್ ಹೇಳಿದರು.

ಈ ಕ್ರಮವು ಸಮುದಾಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದರು.

ಶೇಖ್ ಮುಹಮ್ಮದ್‌ರ ಆದೇಶವನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದ ಕಾನೂನು ವಿಧಿವಿಧಾನಗಳನ್ನು ಪಬ್ಲಿಕ್ ಪ್ರಾಸಿಕ್ಯೂಶನ್ ಆರಂಭಿಸಿದೆ ಎಂದು ಅಟಾರ್ನಿ ಜನರಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News