ಹರೇಕಳದಲ್ಲಿ ಪುಸ್ತಕ ವಿತರಣೆ, ಸನ್ಮಾನ ಸಮಾರಂಭ
ಮಂಗಳೂರು, ಮೇ 24: ಹಣ, ಸಂಪತ್ತು ಕೂಡಿಟ್ಟರೆ ಮಕ್ಕಳು ಅಭಿವೃದ್ಧಿಯಾಗುತ್ತಾರೆ ಎನ್ನುವುದು ಸತ್ಯವಲ್ಲ. ಶಿಕ್ಷಣ, ಉತ್ತಮ ಗುಣ ನಡೆತೆ ಕಲಿಸಿದಾಗ ಮಾತ್ರವೇ ಮಕ್ಕಳು ಸಮಾಜದಲ್ಲಿ ಸತ್ಪ್ರಜೆಗಳಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ವತಿಯಿಂದ ಹರೇಕಳ ಗ್ರಾಮದ ಅರ್ಹ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ರಾಜಗುಡ್ಡೆ ಶಾಲೆಗೆ ಕಂಪ್ಯೂಟರ್ ವಿತರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಾರ್ಟೆಡ್ ಅಕೌಂಟೆಂಟ್ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಜೆ.ಮುಹಮ್ಮದ್ ಇಸಾಕ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ತಾಪಂ ಸದಸ್ಯ ಮುಹಮ್ಮದ್ ಮುಸ್ತಫಾ ಮಲಾರ್ ಕಳೆದ ವರ್ಷ ಸಂಘದಿಂದ ಎಂಟು ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ಪುಸ್ತಕ ವಿತರಣೆ, ಸ್ಕಾಲರ್‌ಶಿಪ್ ಹಾಗೂ ಹೃದಯ, ಕಿಡ್ನಿ, ಕ್ಯಾನ್ಸರ್ ರೋಗಿಗಳಿಗೆ ಧನಸಹಾಯ ನೀಡಲಾಗಿದೆ. ಈ ವರ್ಷ 800 ಮಕ್ಕಳಿಗೆ ಪುಸ್ತಕ, ಕಂಪ್ಯೂಟರ್ ವಿತರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಸ್ಕಾಲರ್‌ಶಿಪ್ ನೀಡಲಾಗುವುದು ಎಂದರು.
ಜಿಪಂ ಸದಸ್ಯೆ ರಶೀದಾ ಬಾನು, ಹರೇಕಳ ಗ್ರಾಪಂ ಅಧ್ಯಕ್ಷೆ ಅನಿತಾ ಡಿಸೋಜ, ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ, ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಹ್ಲಾದ್ ರೈ ಮುದಲೇಮಾರು, ಸಂಚಾಲಕ ಜಯರಾಮ ಆಳ್ವ ಪೋಡಾರು, ಅಕ್ಷರ ಸಂತ ಹರೇಕಳ ಹಾಜಬ್ಬ, ನ್ಯೂಪಡ್ಪುಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶಶಿ ವಿ, ಅಧ್ಯಕ್ಷೆ ಬೇಬಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲಿಲ್ಲಿ ಡಿಸೋಜ, ರಾಜಗುಡ್ಡೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್ ರಾಜಗುಡ್ಡೆ, ಮುಖ್ಯ ಶಿಕ್ಷಕಿ ವಿನೋದಾ, ಹರೇಕಳ ಅನುದಾನಿತ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಡ್ವರ್ಡ್ ನಥಾಯಿಲ್, ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್, ನಿರ್ದೇಶಕರಾದ ಎಂ.ಎ.ಗಫೂರ್, ಟಿ.ಎಚ್. ಹಮೀದ್, ಯು.ಟಿ. ಅಹ್ಮದ್ ಶರೀಫ್, ಎಸ್.ಎಂ.ಇಬ್ರಾಹೀಂ, ಎ.ಎಂ.ಕೆ. ಮುಹಮ್ಮದ್ ಇಬ್ರಾಹೀಂ, ಮುಹಮ್ಮದ್ ಅಶ್ರಫ್, ಎಸ್.ಕೆ. ಇಸ್ಮಾಯೀಲ್, ಪಿ.ಪಿ.ಮೊಯಿನ್ ಪಾಷ, ಬಿ. ಇಬ್ರಾಹೀಂ ಕೆ.ಎಂ.ಎಚ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಅಬ್ದುಲ್ ಲತೀಫ್, ಸಿಬ್ಬಂದಿ ಇಸಾಕ್, ಅಶ್ರಫ್ ಉಪಸ್ಥಿತರಿದ್ದರು.