×
Ad

‘ನವಜಾತ ಶಿಶು ಪ್ರಾಣ ಪ್ರತ್ಯಾಗಮನ’ ಕಾರ್ಯಕ್ರಮ

Update: 2017-05-24 19:38 IST

ಉಡುಪಿ, ಮೇ 24: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಬಾಲರೋಗ ವಿಭಾಗ ಮತ್ತು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ)ನ ಸಹಯೋಗದಲ್ಲಿ ‘ನವಜಾತ ಶಿಶು ಪ್ರಾಣ ಪ್ರತ್ಯಾಗಮನ’ ಕಾರ್ಯಕ್ರಮವು ಇತ್ತೀಚೆಗೆ ಜರಗಿತು.

ಶಿಶುವಿನ ಜನನ ಸಂದರ್ಭದಲ್ಲಿ ಎದುರಾಗುವ ಕ್ಲಿಷ್ಟ ತೊಂದರೆಗಳನ್ನು ಅರಿತು ಸಮಯೋಚಿತ ವೈದ್ಯಕೀಯ ಪರಿಹಾರ ಒದಗಿಸುವ ಉದ್ದೇಶದೊಂದಿಗೆ ಕರ್ನಾಟಕ ಹಾಗೂ ಬೇರೆ ರಾಜ್ಯಗಳಿಂದಲೂ ಆಗಮಿಸಿದ ಸ್ನಾತಕೋತ್ತರ ವಿದ್ಯಾಥಿಗರ್ಳಿಗೆ ಪ್ರಾತ್ಯಕ್ಷಿಕೆ ನಡೆಸಲಾಯಿತು.

ಅಧ್ಯಕ್ಷತೆಯನ್ನು ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರ ಶರ್ಮಾ ವಹಿಸಿದ್ದರು. ಅಕಾಡೆಮಿಯ ಅಧ್ಯಕ್ಷ ಡಾ. ಕೊಟ್ಟುರೇಶ್ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಡಾ.ಚಂದ್ರಕಲಾ ಉಪನ್ಯಾಸ ನೀಡಿದರು.

ಬಾಲರೋಗ ವಿಭಾಗದ ಮುಖ್ಯಸ್ಥ ಡಾ. ಪೃಥ್ವಿರಾಜ್ ಪುರಾಣಿಕ್ ಸ್ವಾಗತಿಸಿದರು. ವಸಂತ್, ಡಾ.ಮಂಜುನಾಥ ಸ್ವಾಮಿ, ಅಶೋಕ, ಡಾ.ಶರಶ್ಚಂದ್ರ ಸಹಕರಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಸೂತಿ ತಂತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಮಮತಾ ಕೆ.ವಿ. ವಹಿಸಿದ್ದರು. ಪ್ರಾಧ್ಯಾಪಕ ಡಾ.ಚೇತನ್ ಕುಮಾರ್ ವಂದಿಸಿದರು. ವಿಭಾಗದ ಸಹಪ್ರಾಧ್ಯಾಪಕಿ ಡಾ.ನಾಗರತ್ನ ಎಸ್.ಜೆ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News