×
Ad

ಕವನ ಸಂಕಲನಗಳಿಗೆ ಆಹ್ವಾನ

Update: 2017-05-24 20:23 IST

ಮಂಗಳೂರು, ಮೇ 24: ಕಾವ್ಯ ಸಾಹಿತ್ಯವನ್ನು ಪೋತ್ಸಾಹಿಸುವ ಸಲುವಾಗಿ 2002ರಿಂದ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನೀಡಲಾಗುವ ರಾಷ್ಟ್ರಮಟ್ಟದ ಹಂಸಕಾವ್ಯ ರಾಷ್ಟ್ರೀಯ ಪ್ರಶಸ್ತಿಗೆ ಕನ್ನಡ, ತುಳು, ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ.

2010ರ ನಂತರ ಪ್ರಕಟವಾದ ಕವನ ಸಂಕಲನಗಳನ್ನು ಮಾತ್ರ ಪರಿಗಣಿಸಲಾಗುವುದು. ಈಗಾಗಲೇ ಪ್ರಶಸ್ತಿ ಪುರಸ್ಕೃತ ಸಂಕಲನಗಳನ್ನು ಸ್ವೀಕರಿಸಲಾಗುವುದಿಲ್ಲ. ಸಂಕಲನವನ್ನು ಸಾಮಾನ್ಯ ಅಂಚೆಯಲ್ಲಿ ಕಳುಹಿಸಬೇಕು.

ಪ್ರಶಸ್ತಿಯು 10 ಸಾವಿರ ರೂ., ಫಲಕ, ಪದಕ ಮಾನಪತ್ರಗಳನ್ನು ಒಳಗೊಂಡಿದೆ. ಕೃತಿಗಳನ್ನು ಕಳುಹಿಸಲು ಕೊನೆಯ ದಿನ ಜೂ.15 ಆಗಿದೆ. ಜುಲೈ 1ರಂದು ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ಜು.23ರಂದು ನಗರದಲ್ಲಿ ನಡೆಯಲಿದೆ.

ಕವನ ಸಂಕಲನವನ್ನು ಕಳುಹಿಸಬೇಕಾದ ವಿಳಾಸ: ಅಧ್ಯಕ್ಷರು, ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಟಾನ, ಕೃಷ್ಣದಾಸ್ ಕಾಂಪೌಂಡ್, ಪಡೀಲ್ ಮಂಗಳೂರು 575007. ಆಸಕ್ತರು ಕೃತಿಗಳನ್ನು ಕಳುಹಿಸಬಹುದು. ಹೆಚ್ಚಿನ ವಿವರಗಳಿಗೆ 9663846484 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News