×
Ad

ಪತ್ತೆಗೆ ಮನವಿ

Update: 2017-05-24 20:24 IST

ಮಂಗಳೂರು, ಮೇ 24: ಮುಳಿಹಿತ್ಲು ಟೈಲರಿ ರಸ್ತೆಯ ರಾಮಯ್ಯ ಆಳ್ವ ಕಾಂಪೌಂಡ್‌ನ ನಿವಾಸಿ ಮಹಾದೇವ ಸ್ವಾಮಿ (42) ಎಂಬವರು ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎಂದಿನಂತೆ ಕೆಲಸಕ್ಕೆಂದು ಕೆಎ19 ಇಕ್ಯೂ3621 ಬೈಕ್‌ನಲ್ಲಿ ಹೋದವರು ಕಂಪೆನಿಗೂ ಹೋಗದೆ, ಮನೆಗೂ ವಾಪಾಸು ಬರದೆ ಕಾಣೆಯಾಗಿದ್ದಾರೆ ಎಂದು ಅವರ ಪತ್ನಿ ಮಂಜುಳಾ ದೂರು ನೀಡಿದ್ದಾರೆ.

ಮಹಾದೇವ ಸ್ವಾಮಿ 5 ಅಡಿ 5 ಇಂಚು ಎತ್ತರವಿದ್ದು, ಸಪೂರ ಶರೀರವನ್ನು ಹೊಂದಿದ್ದಾರೆ. ಕನ್ನಡ, ತುಳು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಅವರು ಹಾಗೂ ಬೈಕ್ ಪತ್ತೆಯಾದಲ್ಲಿ ದಕ್ಷಿಣ ಪೊಲೀಸ್ ಠಾಣೆ 0824-2220518 ಅಥವಾ ನಗರ ನಿಯಂತ್ರಣ ಕೊಠಡಿ 0824-2220400 ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News