×
Ad

ಪರಿಶಿಷ್ಟರ ನಿಧಿಯ ಶೇ.40 ಶಿಕ್ಷಣಕ್ಕೆ ನೀಡಲು ಸೂಚನೆ: ಪ್ರಿಯಾಂಕ

Update: 2017-05-24 20:35 IST

ಮಣಿಪಾಲ, ಮೇ 24: ಜಿಲ್ಲೆಯ ಎಲ್ಲ ಗ್ರಾಪಂ/ಪುರಸಭೆ/ವಿವಿಧ ಇಲಾಖೆಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡ ಅನುದಾನದಲ್ಲಿ ಶಿಕ್ಷಣ ಕ್ಷೇತ್ರಕ್ಕೆ 60:40 ಪ್ರಮಾಣದಲ್ಲಿ ನೀಡುವಂತೆ ಈಗಾಗಲೇ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ  ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ವರ್ಗದ ಕುಂದುಕೊರತೆ ಸಭೆಯಲ್ಲಿ ಅವರು ಸಭಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತಿದ್ದರು.

ನಗರಸಭೆಯಲ್ಲಿ ಶಿಕ್ಷಣಕ್ಕೆ ಅನುದಾನದ ಸಿಗುತ್ತಿಲ್ಲವೆಂಬ ಸಮುದಾಯದ ಮುಖಂಡರ ಆಕ್ಷೇಪವನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಈ ಸಂಬಂಧ ಕ್ರಿಯಾ ಯೋಜನೆ ರೂಪಿಸಿದ್ದು, 40ರಷ್ಟು ಅನುದಾನವನ್ನು ಶೈಕ್ಷಣಿಕ ಖರ್ಚಿಗೆ ಹಾಗೂ ಉನ್ನತ ಶಿಕ್ಷಣಕ್ಕೂ ಮೀಸಲಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಸೆಯಲ್ಲಿ ಶಿಕ್ಷಣಕ್ಕೆ ಅನುದಾನದ ಸಿಗುತ್ತಿಲ್ಲವೆಂಬ ಸಮುದಾಯದ ಮುಖಂಡರ ಆಕ್ಷೇಪವನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಈ ಸಂಬಂಧ ಕ್ರಿಯಾ ಯೋಜನೆ ರೂಪಿಸಿದ್ದು, 40ರಷ್ಟು ಅನುದಾನವನ್ನು ಶೈಕ್ಷಣಿಕ ಖರ್ಚಿಗೆ ಹಾಗೂ ಉನ್ನತ ಶಿಕ್ಷಣಕ್ಕೂ ಮೀಸಲಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನರ್ಸಿಂಗ್ ವಿದ್ಯಾರ್ಥಿಗಳಿಗೂ ಶೈಕ್ಷಣಿಕ ನೆರವು ಪಡೆಯಲು ತೊಂದರೆ ಯಾಗುತ್ತಿರುವುದನ್ನು ಅವರ ಗಮನಕ್ಕೆ ತಂದಾಗ, ಈ ಆಯ್ಕೆ ಪ್ರಕ್ರಿಯೆ ಆನ್‌ಲೈನ್ ಮೂಲಕ ರಾಜ್ಯ ಮಟ್ಟದಲ್ಲಿ ನಡೆಯುತ್ತಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮೇಶ್ ವಿವರಿಸಿದರು.

ಆದಿಉಡುಪಿ ಮತ್ತು ಕುಂದಾಪುರದ ಅಂಬೇಡ್ಕರ್ ಭವನದ ನಿರ್ವಹಣೆ ಕುರಿತು ಚರ್ಚೆ ನಡೆಯಿತು. ಬೈಂದೂರು ಅಂಬೇಡ್ಕರ್ ಭವನವನ್ನು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಅಲ್ಲಿ ಕಳಪೆ ಕಾಮಗಾರಿಯಾಗಿದೆ. ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಮಂಜುನಾಥ ಗಿಳಿಯಾರು ದೂರಿದರು.

ಆದಿಉಡುಪಿ ಮತ್ತು ಕುಂದಾಪುರದ ಅಂಬೇಡ್ಕರ್ ಭವನದ ನಿರ್ವಹಣೆ ಕುರಿತು ಚರ್ಚೆನಡೆಯಿತು. ಬೈಂದೂರು ಅಂಬೇಡ್ಕರ್‌ ಭವನವನ್ನು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಅಲ್ಲಿ ಕಳಪೆ ಕಾಮಗಾರಿಯಾಗಿದೆ ಎಂದು ಮಂಜುನಾಥ ಗಿಳಿಯಾರು ದೂರಿದರು.

ಕುಂದಾಪುರ ತಾಲೂಕು ಮುದೂರು ಸರ್ವೇ ನಂಬರ್ 163ರ 362 ಎಕರೆ ಜಾಗ ಸರ್ವೇಯನ್ನು ಸಹಾಯಕ ಕಮಿಷನರ್, ಅರಣ್ಯಾಧಿಕಾರಿ, ತಹಶೀಲ್ದಾರ್ ಹಾಗೂ ದೂರುದಾರರ ಸಮಕ್ಷಮ ಸ್ಥಳ ಪರಿಶೀಲನೆ ಮಾಡಿ ನಡೆಸಲಾಗಿದ್ದು, ಅಲ್ಲಿ ಜಾಗದ ಒತ್ತುವರಿಯಾಗಿಲ್ಲ ಎಂದು ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ಬಗ್ಗೆ ದೂರುದಾರರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ನಾಯಕರು, ಇಲ್ಲಿನ ಮೂರು ಎಕರೆ ಜಾಗವನ್ನು ಹೇಗೆ ಕೊಲ್ಲೂರು ಕೊಳಚೆ ನೀರು ಘಟಕಕ್ಕೆ ಕಾದಿರಿಸಿದ್ದೀರಿ ಎಂದು ಪ್ರಶ್ನಿಸಿದರು. ಕೊಲ್ಲೂರು ಘಟಕಕ್ಕೆ ಕೊಲ್ಲೂರಿನಲ್ಲೇ ಕೇವಲ 10 ಸೆನ್ಸ್ ಜಾಗ ನೀಡಲಾಗಿದೆ. ಇಲ್ಲಿ ಯಾವುದೇ ಜಾಗ ಕಾದಿರಿಸಿಲ್ಲ ಎಂದು ಪ್ರಿಯಾಂಕ ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿರುವ ಡಿಸಿ ಮನ್ನಾ ಭೂಮಿಯ ಕುರಿತಂತೆ ಸಮಗ್ರ ಮಾಹಿತಿ ನೀಡುವಂತೆ ಹಲವು ನಾಯಕರು ಕೋರಿದರು. ಕಾರ್ಕಳದ ಕುಕ್ಕೂಂದೂರು ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿರುವ ನೀರಿನ ಟ್ಯಾಂಕ್ ಸೋರುವಿಕೆ ಯನ್ನು ಸರಿಪಡಿಸಿದ್ದು, ಮುಂದಿನ ದಿನಗಳಲ್ಲಿ ಹೊಸ ಟ್ಯಾಂಕ್ ರಚನೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಅಧಿಕಾರಿಗಳು ಹೇಳಿದರು.

 ಬನ್ನಂಜೆ ಆಶ್ರಮ ಶಾಲೆಯ ಅವ್ಯವಸ್ಥೆ ಕುರಿತು ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದು ಐಟಿಡಿಪಿ ಇಲಾಖೆ ಅಧಿಕಾರಿಗಳು ವಿವರಿಸಿದರು. ಪಡುಬಿದ್ರೆ ಗ್ರಾಪಂ ವ್ಯಾಪ್ತಿಯ ನಡ್ಸಾಲ್ ಗ್ಯಾಸ್ ಗೋಡೌನ್ ಸ್ಥಳಾಂತರದ ಬಗ್ಗೆ ಇಂದು ಸಂಜೆಯೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬನ್ನಂಜೆ ಆಶ್ರಮ ಶಾಲೆಯ ಅವ್ಯವಸ್ಥೆ ಕುರಿತು ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದು ಐಟಿಡಿಪಿ ಇಲಾಖೆ ಅಧಿಕಾರಿಗಳು ವಿವರಿಸಿದರು. ಪಡುಬಿದ್ರೆ ಗ್ರಾಪಂ ನ್ಯಾಪ್ತಿಯ ನಡ್ಸಾಲ್ ಗ್ಯಾಸ್ ಗೋಡೌನ್ ಸ್ಥಳಾಂತರದ ಬಗ್ಗೆ ಇಂದು ಸಂಜೆಯೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಉಚ್ಚಿಲದ ಬಡಾ ಗ್ರಾಮದಲ್ಲಿರುವ ಸಾರ್ವಜನಿಕ ರುದ್ರಭೂಮಿಯ ಬಗ್ಗೆ ಎದ್ದಿರುವ ರಾಜಕೀಯ ಪ್ರೇರಿತ ವಿವಾದವನ್ನು ದಿಟ್ಟವಾಗಿ ಎದುರಿಸಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಮಹಿಳಾ ಜಿಲ್ಲಾಧಿಕಾರಿಗೆ ಹಾಗೂ ಬೆಂಬಲ ನೀಡಿದ ಪೊಲೀಸ್ ಇಲಾಖೆಗೆ ಸುಂದರ್ ಮಾಸ್ಟರ್ ಅಭಿನಂದನೆ ಸಲ್ಲಿಸಿದರು. ಅದೇ ರೀತಿ ಬಾಳೆಕುದ್ರು ಹಂಗಾರ್‌ಕಟ್ಟೆ ಸರಕಾರಿ ಶಾಲೆಯ ಪಕ್ಕದಲ್ಲಿರುವ ಫಿಶ್‌ಮಿಲ್ ಘಟಕದ ಪರವಾನಿಗೆ ರದ್ದುಪಡಿಸಿರುವುದಕ್ಕೆ ಅವರು ಜಿಲ್ಲಾಧಿಕಾರಿ ಗಳನ್ನು ಅಭಿನಂದಿಸಿದರು.
ಬ್ರಹ್ಮಾವರ, ಹಂದಾಡಿ, ಬಾರಕೂರಿನ ಪಿಡಿಒ ಹಾಗೂ ವಿಎಗಳು ದಲಿತರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆನಂದ ಕಟಪಾಡಿ ಹಾಗೂ ವಿಜಯಲಕ್ಷ್ಮಿ ದೂರಿದರು.

ಹಳ್ಳಿಹೊಳೆಯಲ್ಲಿ 11 ದಲಿತ ಕುಟುಂಬ ವಾಸವಾಗಿರುವಲ್ಲಿ ಈಗಲೂ ರಸ್ತೆ ಸಂಪರ್ಕವೇ ಇಲ್ಲವಾಗಿದ್ದು, ಅಲ್ಲಿನ ನಿವಾಸಿಗಳು ಈಗಲೂ ಅನಾರೋಗ್ಯದ ಮಕ್ಕಳನ್ನು ಎತ್ತಿಕೊಂಡು ಹತ್ತಾರು ಕಿ.ಮೀ. ಕ್ರಮಿಸಬೇಕಾಗಿದೆ. ಅಲ್ಲಿಗೆ ತಕ್ಷಣವೇ ಸಂಪರ್ಕ ರಸ್ತೆ ಕಲ್ಪಿಸುವಂತೆ, ವಾಸುದೇವ ಮುದುಗಲ್ ಒತ್ತಾಯಿಸಿದರು.

ಉದಯ ಕುಮಾರ್ ತಲ್ಲೂರ್, ಸುಂದರ ಮಾಸ್ತರ್, ಶ್ಯಾಮರಾಜ್ ಬಿರ್ತಿ, ಮಂಜುನಾಥ್ ಮುಂತಾದ ಮುಖಂಡರು ಸಭೆಯಲ್ಲಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News