ಗಿಡಮೂಲಿಕೆ ಔಷಧಿ ಪದ್ಧತಿ ಬಗ್ಗೆ ನಿರ್ಲಕ್ಷ್ಯ ಬೇಡ: ಶೀಲಾ ಶೆಟ್ಟಿ
ಉಡುಪಿ, ಮೇ 24: ಗಿಡಮೂಲಿಕೆ ಔಷಧಗಳಿಂದ ಏಡ್ಸ್, ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳನ್ನು ಗುಣಪಡಿಸಬಹು ದಾಗಿದ್ದು, ಗಿಡ ಮೂಲಿಕೆ ಔಷಧ ಪದ್ದತಿ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಉಡುಪಿ ಜಿಪಂ ಉಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಹೇಳಿದ್ದಾರೆ.
ಬುಧವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ, ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇವರ ಸಹಯೋಗದಲ್ಲಿ ನಡೆದ ಕೊರಗ ಮೂಲ ನಿವಾಸಿ ಬುಡಕಟ್ಟು ಸಮುದಾಯದ ಗಿಡಮೂಲಿಕೆ ಔಷಧ ಪದ್ದತಿ ಅನುಸರಣೆ ಕುರಿತ ಒಂದು ದಿನದ ಪ್ರಾದೇಶಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಣಿಪಾಲದ ಜಿಪಂ ಸಭಾಂಗಣದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋನಾ ಸಂಸ್ಥೆ ಮೈಸೂರು ಇವರ ಸಹಯೋಗದಲ್ಲಿ ನಡೆದ ಕೊರಗ ಮೂಲ ನಿವಾಸಿ ಬುಡಕಟ್ಟು ಸಮುದಾಯದ ಗಿಡಮೂಲಿಕೆ ಔಷ ಪದ್ದತಿ ಅನುಸರಣೆ ಕುರಿತ ಒಂದು ದಿನದ ಪ್ರಾದೇಶಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪಾರಂಪರಿಕ ಗಿಡಮೂಲಿಕೆಗಳ ಪ್ರಯೋಜನ ಆಧುನಿಕ ಯುಗದಲ್ಲಿ ಇನ್ನೂ ಪರಿಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಆಧುನಿಕ ಔಷಧ ಪದ್ದತಿ ಗಳಂತೆ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಗಿಡಮೂಲಿಕೆ ಔಷಧಗಳಿಂದ ಆರೋಗ್ಯ ವೃದ್ದಿಯಾಗಲಿದೆ. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾರಂಪರಿಕ ಗಿಡಮೂಲಿ ಔಷಧ ಬಳಕೆಯಿಂದ ಸದೃಢ ಆರೋಗ್ಯ ಹೊಂದುವುದರಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದವರು ಹೇಳಿದರು.
ಕಾಡು ಮತ್ತು ಗುಡ್ಡಗಾಡುಗಳಲ್ಲಿ ನೆಲೆಸಿರುವ ಆದಿವಾಸಿ ಸಮುದಾಯಗಳಿಗೆ ಗಿಡಮೂಲಿಕೆ ಔಷಧಗಳ ಬಳಕೆ ಪರಂಪರಾಗತವಾಗಿ ಒಲಿದಿದ್ದು, ಗಿಡಮೂಲಿಕೆ ಗಳು ದೊರೆಯುವ ಸ್ಥಳಗಳ ಬಗ್ಗೆ ಅವರಿಗೆ ನಿಖರವಾಗಿ ಗೊತ್ತಿದೆ. ಅವರ ಈ ಜ್ಞಾನವನ್ನು ಬಳಸಿಕೊಳ್ಳಬೇಕಿದೆ. ಆದರೆ ಅವರ ಗಿಡಮೂಲಿಕೆ ಔಷದಗಳನ್ನು ಲಾಭದ ದೃಷ್ಟಿಯಿಂದ ವ್ಯಾಪಾರೀಕರಣಗೊಳಿಸದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಶೀಲಾ ಶೆಟ್ಟಿ ಹೇಳಿದರು.
ಕಾಡು ಮತ್ತು ಗುಡ್ಡಗಾಡುಗಳಲ್ಲಿ ನೆಲೆಸಿರುವ ಆದಿವಾಸಿ ಸಮುದಾಯಗಳಿಗೆ ಗಿಡಮೂಲಿಕೆ: ಔಷಗಳ ಬಳಕೆ ಪರಂಪರಾಗತವಾಗಿ ಒಲಿದಿದ್ದು, ಗಿಡಮೂಲಿಕೆಗಳು ದೊರೆಯುವ ಸ್ಥಳಗಳ ಬಗ್ಗೆ ಅವರಿಗೆ ನಿಖರವಾಗಿ ಗೊತ್ತಿದೆ. ಅವರ ಈ ಜ್ಞಾನವನ್ನು ಬಳಸಿಕೊಳ್ಳಬೇಕಿದೆ. ಆದರೆ ಅವರ ಗಿಡಮೂಲಿಕೆ ಔಷದಗಳನ್ನು ಲಾಭದ ದೃಷ್ಟಿಯಿಂದ ವ್ಯಾಪಾರೀಕರಣಗೊಳಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಶೀಲಾ ಶೆಟ್ಟಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಮಾತನಾಡಿ, ಪಾರಂಪರಿಕೆ ಔಷಧ ವಿಧಾನಗಳನ್ನು ಮೂಲ ನಿವಾಸಿಗಳಿಂದ ಅರಿತು ಅದರ ಪ್ರಯೋಜವನ್ನು ಮುಂದಿ ಪೀಳಿಗೆಗೆ ತಲುಪಿಸಬೇಕು ಎಂದರು
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಬಸವನಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದಲ್ಲಿ 75 ಮೂಲ ನಿವಾಸಿ ಪಂಗಡಗಳಿವೆ. ರಾಜ್ಯದಲ್ಲಿ 50 ಬುಡಕಟ್ಟು ಸಮುದಾಯಗಳಿದ್ದು, ಇದರಲ್ಲಿ ಜೇನು ಕುರುಬ ಮತ್ತು ಕೊರಗ ಸಮುದಾಯ ಮೂಲ ನಿವಾಸಿಗಳಾಗಿವೆ. ಈ ಸಮುದಾಯ ಗಳಲ್ಲಿ ಪರಂಪರಾಗತವಾಗಿ ಬಳಕೆಯಲ್ಲಿರುವ ಗಿಡಮೂಲಿಕೆ ಔಷಧಗಳ ಜ್ಞಾನ ಭಂಡಾರವನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಂಶೋಧಕರು ಈ ಔಷಧಗಳ ಕುರಿತು, ಸಮುದಾಯಗಳ ಈ ಪದ್ದತಿಯನ್ನು ಉಳಿಸಿ ಬೆಳೆಸಲು ಹೆಚ್ಚಿನ ಸಂಶೋಧನೆ ನಡೆಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಮೃತ್ಯುಂಜಯ, ಕೊರಗ ಸಮುದಾಯದ ಬಾಬು ಪಾಂಗಾಳ, ಗಣೇಶ್ ಬಾರಕೂರು, ಗೌರಿ, ಬೊಗ್ರ ಕೊರಗ ಹಾಗೂ ಗಣೇಶ್ ಕೊರಗ ಉಪಸ್ಥಿತರಿದ್ದರು.