ಬೆಂಕಿ ಆಕಸ್ಮಿಕ: ಗಾಯಾಳು ಮಹಿಳೆ ಮೃತ್ಯು
Update: 2017-05-24 21:51 IST
ಕಾರ್ಕಳ, ಮೇ 24: ಮಾಳ ಗ್ರಾಮದ ಇಂದಿರಾನಗರ ಬಿದಿರ ಪಲ್ಕೆ ಎಂಬಲ್ಲಿ ಬೆಂಕಿ ಆಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ಇಂದಿರಾನಗರದ ಕಮಲ(80) ಎಂದು ಗುರುತಿಸಲಾಗಿದೆ.
ಇವರು ಮೇ 5ರಂದು ಬೆಳಗ್ಗೆ ಮನೆಯ ಕೊಟ್ಟಿಗೆಯಲ್ಲಿ ಬಿಸಿನೀರು ಕಾಯಿಸುವ ವೇಳೆ ಒಲೆಯ ಬೆಂಕಿ ಆಕಸ್ಮಿಕವಾಗಿ ಅವರ ಮೈಗೆ ತಗುಲಿತು. ಇದರಿಂದ ಸುಟ್ಟ ಗಾಯಗೊಂಡ ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.