×
Ad

ಬಾಲಕಿಗೆ ದೌರ್ಜನ್ಯ ಪ್ರಕರಣ: ಆರೋಪಿಯಿಂದ ದೂರು

Update: 2017-05-24 21:55 IST

ಮಲ್ಪೆ, ಮೇ 24: ಕೋಡಿಬೆಂಗ್ರೆಯ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿ ಬಂಧನಕ್ಕೆ ಒಳಗಾಗಿರುವ ಆರೋಪಿ ಯಾದವ ಕೋಟ್ಯಾನ್ (30) ತನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಮೇ 23ರಂದು ಬೆಳಗ್ಗೆ ಕೋಡಿಬೆಂಗ್ರೆಯ ಮೀನುಗಾರಿಕಾ ಬಂದರಿನಲ್ಲಿರುವಾಗ ದಿನೇಶ್ ಹಾಗೂ ಇತರ ಮೂವರು ಬಂದು ಏಕಾಏಕಿಯಾಗಿ ಹೊಡೆದು ನಂತರ ಕಾರಿನಲ್ಲಿ ದಿನೇಶ್‌ರವರ ಮನೆ ಬಳಿ ಕರೆತಂದು ಅಲ್ಲಿಯೂ ಕಬ್ಬಿಣದ ರಾಡ್ ಹಾಗೂ ಮರದ ರೀಪಿನಿಂದ ಕೈಗೆ, ಕಾಲಿಗೆ, ಮುಖಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಯಾದವ ಕೋಟ್ಯಾನ್ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News