ರಮಝಾನ್ ತಿಂಗಳ ಪ್ರತೀ ದಿನ ’ದಅ್ ವಾ ಸಂಗಮ’

Update: 2017-05-24 17:37 GMT

ಬಂಟ್ವಾಳ, ಮೇ 24: ಬೆಳ್ತಂಗಡಿ ದಾರುಸ್ಸಲಾಂ ದಅ್ ವಾ ಕಾಲೇಜಿನ ಪ್ರಥಮ ವಾರ್ಷಿಕದ ಪ್ರಯುಕ್ತ ದಕ್ಷಿಣ ಕನ್ನಡ ಹಾಗೂ ಹೊರ ಜಿಲ್ಲೆಯ ಪ್ರಮುಖ ಮಸೀದಿಗಳಲ್ಲಿ ರಮಝಾನ್ ತಿಂಗಳ ಪ್ರತೀ ದಿನ ’ದಅ್ ವಾ ಸಂಗಮ’ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸೈಯದ್ ಅಲೀ ತಂಙಳ್ ಕರಾವಳಿ ತಿಳಿಸಿದ್ದಾರೆ.

ಬುಧವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮ ರಮಝಾನ್ ತಿಂಗಳ ಮೂರನೆ ಉಪವಾಸದಂದು ಉಳ್ಳಾಲ ದರ್ಗಾ ಝಿಯಾರತ್‌ನೊಂದಿಗೆ ಪ್ರಾರಂಭಗೊಂಡು ಬೇರೆ ಬೇರೆ ದಿನಗಳಲ್ಲಿ ಜಿಲ್ಲೆಯ ಪ್ರಮುಖ ಕೇಂದ್ರಗಳಾದ ಬಂದರ್, ಮಿತ್ತಬೈಲ್, ಉಪ್ಪಿನಂಗಡಿ, ಕಡಬ, ಪುತ್ತೂರು, ಬೆಳ್ಳಾರೆ, ಮೂಡಬಿದರೆ ಹಾಗೂ ಮೂಡಿಗೆರೆ, ಕಾಸರಗೋಡಿನ ಮಸೀದಿಗಳಲ್ಲಿ ಲುಹರ್ ನಮಾಝ್ ಬಳಿಕ ಪ್ರಭಾಷಣ ಕಾರ್ಯಕ್ರಮ ನಡೆಯಲಿದೆ. ಮೂರನೆ ಉಪವಾಸದ ಮೊದಲ ದಿನ ಬಂದರ್ ಝೀನತ್ ಬಕ್ಷಾ ಮಸೀದಿಯಲ್ಲಿ ಪ್ರಭಾಷಣ ಕಾರ್ಯಕ್ರಮ ನಡೆಯಲಿದ್ದು ಕೊನೆಗೆ ಬೆಳ್ತಂಗಡಿಯಲ್ಲಿ ಸಮಾಪ್ತಿಗೊಳ್ಳಲಿದೆ. ಈ ಎಲ್ಲ ಸಮಾರಂಭದಲ್ಲಿ ಸಮಸ್ತ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದ್ದಾರೆ.

ಸಮಸ್ತ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಪಾಣಕ್ಕಾಡ್ ಸೈಯದ್ ಅಬ್ಬಾಸಲಿ ಶಿಹಾಬ್ ತಂಙಳ್, ಸೈಯದ್ ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್, ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಸಹಿತ ಮೊದಲಾದವರು ಈ ಸಂಸ್ಥೆಗೆ ನೇತೃತ್ವ ನೀಡುತ್ತಿದ್ದಾರೆ ಎಂದ ಅವರು ಸಮನ್ವಯ ಶಿಕ್ಷಣದ ಮೂಲಕ ಪವಿತ್ರ ಇಸ್ಲಾಮಿನ ಪ್ರಚಾರ ಹಾಗೂ ಪ್ರಬುದ್ಧ ಉಲಮಾಗಳನ್ನು ಸೃಷ್ಟಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ ಈ ಸಂಸ್ಥೆಯಲ್ಲಿ 60 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯ ನಿರ್ವಾಹಕ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಪೋಸೋಟು, ವ್ಯವಸ್ಥಾಪಕ ಬಶೀರ್ ದಾರಿಮಿ, ಬೆಳ್ತಂಗಡಿ ಜುಮಾ ಮಸೀದಿ ಖತೀಬ್ ಹನೀಫ್ ದಾರಿಮಿ ಸವಣೂರು, ಪ್ರೋಫೆಸರ್ ಮುಹಮ್ಮದ್ ಇಸ್ಹಾಕ್ ಕೌಸರಿ, ಹಮೀದ್ ಕಣ್ಣೂರು, ಇಲ್ಯಾಸ್ ಕಕ್ಕಿಂಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News