×
Ad

ಮೇ 27: ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ

Update: 2017-05-24 23:46 IST

ಸುಳ್ಯ, ಮೇ 24 : ಸುಳ್ಯ ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ಸುಳ್ಯ ತಾಲೂಕು ಮಟ್ಟದ ಸಾರ್ವಜನಿಕ ಮುಕ್ತ ‘ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಟ್ರೋಫಿ-2017 ’ಕಬಡ್ಡಿ ಪಂದ್ಯಾಟ ಮೇ 27 ರಂದು ಎಲಿಮಲೆ ಜ್ಞಾನದೀಪ ಆಂಗ್ಲಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.

ಪಂಡಿತ್ ದೀನ್‌ದಯಾಳ್ ಜನ್ಮಶತಾಬ್ದಿ ಪ್ರಯುಕ್ತ ಈ ಪಂದ್ಯಾಟವನ್ನು ಆಯೋಜಿಸಲಾಗಿದೆ. ಅಂದು ಪೂರ್ವಾಹ್ನ 9:30ಕ್ಕೆ ಸಂಸದ ನಳಿನ್‌ಕುಮಾರ್ ಕಟೀಲ್ ಉದ್ಘಾಟಿಸುವರು. ಯುವ ಮೋರ್ಚಾಧ್ಯಕ್ಷ ಪದ್ಮನಾಭ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಂಜೆ 4:30ಕ್ಕೆ ಸಮಾರೋಪ ನಡೆಯಲಿದೆ.

 ವಿಜೇತರಿಗೆ ಪ್ರಥಮ 7,777 ರೂಪಾಯಿ, ದ್ವಿತೀಯ 5,555, ತೃತೀಯ 3,333 ನಗದು ಮತ್ತು ಶಾಶ್ವತ ಫಲಕ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News