×
Ad

ಚಿನ್ನ ಕಳ್ಳತನ:ಕಸ್ಟಮ್ಸ್ ಅಧಿಕಾರಿ ಸೆರೆ

Update: 2017-05-25 15:26 IST

ಹೊಸದಿಲ್ಲಿ,ಮೇ 25: ಇಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕಸ್ಟಮ್ಸ್ ಇಲಾಖೆಯ ಲಾಕರ್‌ಗಳಿಂದ ಚಿನ್ನ ಕಳ್ಳತನಕ್ಕೆ ಸಂಬಂಧಿಸಿದಂತೆ ಸೋನೆಪತ್‌ನಿಂದ ಇಲಾಖೆಯ ಹಿರಿಯ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ.

  ಸೋನೆಪತ್‌ನ ಕಸ್ಟಮ್ಸ್ ಇಲಾಖೆಯ ಅಧೀಕ್ಷಕ ಸಂಜೀವ ಕುಮಾರ್ ಬಂಧಿತ ವ್ಯಕ್ತಿ. ಕಸ್ಟಮ್ಸ್ ಇಲಾಖೆಯು ಪ್ರಯಾಣಿಕರು ವಿದೇಶಗಳಿಂದ ಅಕ್ರಮವಾಗಿ ತರುವ ಚಿನ್ನವನ್ನು ವಶಪಡಿಸಿಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳುವವರೆಗೂ ಅದನ್ನು ವಿಮಾನ ನಿಲ್ದಾಣದಲ್ಲಿ ತನಗಾಗಿಯೇ ಮೀಸಲಾಗಿರುವ ಲಾಕರ್‌ಗಳಲ್ಲಿ ಭದ್ರವಾಗಿರಿಸುತ್ತದೆ. ಈ ಲಾಕರ್‌ಗಳಿಂದ 38 ಕೆಜಿಗೂ ಅಧಿಕ ಚಿನ್ನ ನಾಪತ್ತೆಯಾಗಿದ್ದು, ಸಿಬಿಐ ಈ ಬಗ್ಗೆ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News