×
Ad

ನಾಪತ್ತೆಯಾದ ಸುಖೋಯ್ ವಿಮಾನದ ಪೈಲೆಟ್ ಕೇರಳದ ವ್ಯಕ್ತಿ

Update: 2017-05-25 16:04 IST

ಹೊಸದಿಲ್ಲಿ,ಮೇ 25: ಅರುಣಾಚಲ ಪ್ರದೇಶದಲ್ಲಿ ಚೀನದ ಗಡಿ ಸಮೀಪ ಕಾಣೆಯಾದ ಭಾರತದ ಸುಖೋಯ್ ವಿಮಾನದಲ್ಲಿ ಇಬ್ಬರು ಪೈಲೆಟ್‌ಗಳಲ್ಲಿ ಒಬ್ಬರು ಕ್ಯಾಲಿಕಟ್ ನ ವ್ಯಕ್ತಿಯಾಗಿದ್ದಾರೆ. ಪಂದಿರಿಕ್ಕಾವ್ ಪನ್ನಿಯೂರ್ಕುಳಂ ಸ್ವದೇಶಿ ಪೈಲಟ್ ಲೆಫ್ಟಿನೆಂಟ್ ಅಚ್ಚುದೇವ್ (25) ಕಾಣೆಯಾದವರಲ್ಲಿ ಒಬ್ಬರು. ಇನ್ನೊಬ್ಬರು ಉತ್ತರಭಾರತದ ಸ್ಕಾಡ್ರನ್ ಲೀಡರ್ ಆಗಿದ್ದಾರೆ. ಕಾಡು ಪ್ರದೇಶದಲ್ಲಿ ಕಾಣೆಯಾದ ವಿಮಾನವನ್ನುಸೇನೆ ಹುಡುಕುತ್ತಿದೆ.

ಅಚ್ಚುದೇವ್‌ರ ನಾಪತ್ತೆ ವಿಷಯ ತಿಳಿದು ಹೆತ್ತವರಾದ ಸಹದೇವ ಮತ್ತು ಜಯಶ್ರಿ ದಂಪತಿಗಳು ಅಸ್ಸಾಂನ ತೇಜ್‌ಪುರ್ ವಾಯುಸೇನೆಯ ನೆಲೆಗೆ ಹೊರಟಿದ್ದಾರೆ. ಮಂಗಳವಾರ ಬೆಳಗ್ಗೆ ಹತ್ತೂವರೆಗಂಟೆಗೆ ತರಬೇತಿ ಹಾರಾಟದ ವೇಳೆ ವಿಮಾನ ಕಾಣೆಯಾಗಿತ್ತು. ಇಬ್ಬರು ಮಾತ್ರ ಪ್ರಯಾಣಿಸುವ ಸಾಮರ್ಥ್ಯ ವಿಮಾನದ್ದಾಗಿದೆ.. ಬಿಶ್ವನಾಥ್ ಜಿಲ್ಲೆಯ ದುಬಿ ಎಂಬಲ್ಲಿಂದ ವಿಮಾನದಿಂದ ಕೊನೆಯ ಸಂದೇಶ ಲಭಿಸಿತ್ತು. ವಿಮಾನ ಪತ್ತೆಹಚ್ಚು ವ ಕಾರ್ಯ ಮುಂದುವರಿದಿದ್ದು,ವಾಯುಸೇನೆಯ ನಾಲ್ಕು ತಂಡಗಳು, ಭೂಸೇನೆಯ ಒಂಬತ್ತು ತಂಡಗಳು, ಹಾಗೂರಾಜ್ಯಸರಕಾರದ ವ್ಯವಸ್ಥೆಯ ನೆರವಿನಲ್ಲಿ ಹುಡುಕಾಟ ನಡೆಯುತ್ತಿದೆ ಎಂದು ವಾಯುಸೇನೆಯ ವಕ್ತಾರ ವಿಂಗ್ ಕಮಾಂಡರ್ ಅನುಪಂ ಬ್ಯಾನರ್ಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News