ಒಂದೂವರೆ ವರ್ಷದಲ್ಲಿ ಎಲ್ಲರಿಗೂ ಕೇರಳದಲ್ಲಿ ಇಂಟರ್‌ನೆಟ್: ಪಿಣರಾಯಿ

Update: 2017-05-25 10:40 GMT

ತಿರುವನಂತಪುರಂ,ಮೇ 25: ಎಲ್ಲರಿಗೂ ಇಂಟರ್‌ನೆಟ್ ಎನ್ನುವ ಗುರಿಯೊಂದಿಗೆ 1000 ಕೋಟಿ ರೂಪಾಯಿ ವೆಚ್ಚದಲ್ಲಿ ಕೆ-ಫೋನ್ ಯೋಜನೆ 18 ತಿಂಗಳಲ್ಲಿ ಪೂರ್ತಿಗೊಳ್ಳಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

“ಇಂಟರ್‌ನೆಟ್ ಒಂದು ಹಕ್ಕು” ಎಂದು ಘೋಷಿಸಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಫೇಸ್‌ಬುಕ್ ಮೂಲಕ ಹೇಳಿದ್ದಾರೆ. ಕೇರಳದಲ್ಲಿ ಹೊಸ ಒಪ್ಟಿಕಲ್ ಪೈಬರ್ ಶೃಂಖಲೆಯನ್ನು ಸ್ಥಾಪಿಸಲಾಗುತ್ತದೆ. ಜೊತೆಗೆ ಪ್ರತಿವರ್ಷವೂ ಸಾರ್ವಜನಿಕ ಸ್ಥಳಗಳಲ್ಲಿ 1000 ಕೇಂದ್ರಗಳಲ್ಲಿ ಉಚಿತ ವೈ-ಫೈ ಹಾಟ್‌ಸ್ಫಾಟ್‌ಗಳನ್ನು ಸ್ಥಾಪಿಸಲಾಗುತ್ತಿದೆ.

ಮೊದಲ ಎರಡು ವರ್ಷಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಯೋಜನೆ ಜಾರಿಗೆ ತರುವ ಸ್ಥಳಗಳನ್ನು ಗುರುತಿಸಲಾಗಿದ್ದು, ಟೆಂಡರ್ ಕರೆಯುವ ಪ್ರಕ್ರಿಯೆ ಮುಂದಿನ ತಿಂಗಳು ಪೂರ್ಣವಾಗಲಿದೆ.

ಇ-ಗವರ್ನ್ಸ್ ಸೇವೆ ಜನರಿಗೆಉಪಯುಕ್ತಗೊಳಿಸಲು ಮಲೆಯಾಳಂ ಭಾಷೆಯಲ್ಲಿ ವೆಬ್ ಅಪ್ಲಿಕೇಶನ್ ಸಿದ್ಧವಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಉದ್ಯೋಗ ನೈಪುಣ್ಯವನ್ನು ಹೆಚ್ಚಿಸಲು ಸ್ಕಿಲ್ ಡೆಲಿವರಿ ಪ್ಲಾಟ್‌ಫಾರ್ಮ್‌ನ್ನು ಜಾರಿಗೆ ತರಲಾಗಿದೆ. ಇದಲ್ಲದೆ, 150 ಇಂಜಿನಿಯರಿಂಗ್ ಕಾಲೇಜುಗಳು, ಐಟಿ ಪಾರ್ಕುಗಳನ್ನು ಜೋಡಿಸುವ ಯೋಜನೆಗೂ ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News