×
Ad

ಪಜೀರ್: ಗ್ರಾಮಕರಣಿಕ ಎಸಿಬಿ ಬಲೆಗೆ

Update: 2017-05-25 16:50 IST

ಬಂಟ್ವಾಳ, ಮೇ 25: ಪಜೀರು ಕೂರ್ನಡು ಗ್ರಾಮ ಪಂಚಾಯತ್ ಗ್ರಾಮ ಕರಣಿಕ ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.

ಪಜೀರು ಕೂರ್ನಡು ಗ್ರಾಮ ಪಂಚಾಯತ್ ಗ್ರಾಮ ಕರಣಿಕ ಗೋಪಿಲಾಲ್ ಪಿ. ಲಂಚ ಸ್ವೀಕರಿಸುತ್ತಿದ್ದ ಆರೋಪಿಯಾಗಿದ್ದಾರೆ.
ಕೂರ್ನಾಡಿನಲ್ಲಿ ಅಹ್ಮದ್ ನಝೀರ್ ಎಂಬವರು ಖರೀದಿಸಿದ 5 ಸೆಂಟ್ಸ್ ಜಾಗದ ಭೂ ಪರಿವರ್ತನೆಗೆ ಸಂಬಂಧಿಸಿ ಬಿ.ಸಿ.ರೋಡ್‌ನಲ್ಲಿರುವ ತಾಲೂಕು ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದವರು ಕಾರ್ಯಾಚರಣೆ ನಡೆಸಿ ಗೋಪಿಲಾರ್ ಅವರನ್ನು ರೆಡ್‌ಹ್ಯಾಂಡಾಗಿ ಬಂಧಿಸಿದ್ದಾರೆ.

ಕೂರ್ನಾಡಿನಲ್ಲಿ ಅಹ್ಮದ್ ನಝೀರ್ ಎಂಬವರು 5 ಸೆಂಟ್ಸ್ ಜಾಗ ಖರೀದಿಸಿದ್ದರು. ಇದರ ಭೂ ಪರಿವರ್ತನೆಗೆ ಸಂಬಂಧಿಸಿ ಗೋಪಿಲಾಲ್ ಲಂಚದ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಈ ಸಂಬಂಧ 3 ಸಾವಿರ ರೂ. ಅನ್ನು ನಝೀರ್ ಈ ಹಿಂದೆ ನೀಡಿದ್ದರು. ಆದರೆ ಗೋಪಿನಾಥ್ ಮತ್ತೆ 4 ಸಾವಿರ ರೂ. ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಈ ಬಗ್ಗೆ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಸೂಚನೆಯಂತೆ ನಝೀರ್ ಅವರ ಸಹೋದರ ಮುತ್ತಲಿಬ್ ಇಂದು 4 ಸಾವಿರ ರೂ. ನೀಡುತ್ತಿದ್ದಂತೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ದ.ಕ. ಜಿಲ್ಲಾ ಡಿವೈಎಸ್ಪಿ ಸುಧೀರ್ ಎಂ. ಹೆಗ್ಡೆ ನೇತೃತ್ವದ ದಾಳಿ ನಡೆಸಿ ಗೋಪಿನಾಥ್ ಅವರನ್ನು ಬಂಧಿಸಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಭ್ರಷ್ಟಾಚಾರ ನಿಗ್ರಹ ದಳದ ದ.ಕ. ಜಿಲ್ಲಾ ಡಿವೈಎಸ್ಪಿ ಸುಧೀರ್ ಎಂ. ಹೆಗ್ಡೆ ನೇತೃತ್ವದಲ್ಲಿ ಹರಿಪ್ರಸಾದ್, ಉಮೇಶ್, ಪ್ರಶಾಂತ್ ಎಂ., ರಾಧಾಕೃಷ್ಣ, ರಾಜೇಶ್, ಗಣೇಶ್ ಮತ್ತು ವೈಶಾಲಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News