×
Ad

ಜೈಲಿಗೆ ಕರೆದೊಯ್ಯುತ್ತಿದ್ದಾಗ ಪರಾರಿಯಾಗಿದ್ದ ಕೊಲೆ ಆರೋಪಿ ಪೊಲೀಸ್ ಬಲೆಗೆ

Update: 2017-05-25 17:48 IST

ಕಾಸರಗೋಡು,ಮೇ 25 : ನ್ಯಾಯಾಲಯಕ್ಕೆ  ಹಾಜರುಪಡಿಸಿ ಮರಳಿ ಕರೆದೊಯ್ಯುತ್ತಿದ್ದಾಗ  ಕೊಲೆ ಯತ್ನ ಪ್ರಕರಣವೊಂದರ ಆರೋಪಿ ಪೋಲೀಸರ ಕಣ್ತಪ್ಪಿಸಿ  ಪರಾರಿಯಾಗಲೆತ್ನಿಸಿ  ಕೆಲವೇ ಗಂಟೆಗಳಲ್ಲಿ ಪೊಲೀಸ್ ಬಲೆಗೆ ಬಿದ್ದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಕಳ್ನಾಡಿನ  ಮುಹಮ್ಮದ್  ಮುನೀರ್ ( 30) ಪರಾರಿಯಾಗಲೆತ್ನಿಸಿದ ಆರೋಪಿ.

ವಿದ್ಯಾನಗರ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ  ನಡೆದ ಕೊಲೆ  ಯತ್ನ ಪ್ರಕರಣವೊಂದರ ಆರೋಪಿಯಾಗಿದ್ದಾನೆ.

ಕಣ್ಣೂರು  ಸೆಂಟ್ರಲ್ ಜೈಲ್ ನಲ್ಲಿ  ನ್ಯಾಯಾಂಗ ಬಂಧನದಲ್ಲಿದ್ದ  ಮುನೀರ್  ನನ್ನು   ಕಾಸರಗೋಡು   ನ್ಯಾಯಾಲಯಕ್ಕೆ  ಹಾಜರು ಪಡಿಸಿ ಮರಳಿ  ಸೆಂಟ್ರಲ್ ಜೈಲ್ ಗೆ ಕರೆದೊಯ್ಯುತ್ತಿದ್ದಾಗ  ವಿದ್ಯಾನಗರ ದಲ್ಲಿ  ಪೊಲೀಸರ  ಕಣ್ತಪ್ಪಿಸಿ  ಬಸ್ಸು ಮೂಲಕ ಪರಾರಿಯಾಗಿದ್ದನು . ಕೂಡಲೇ ಕಾರ್ಯಪ್ರವತ್ತರಾದ  ವಿದ್ಯಾನಗರ ಮತ್ತು ಕಾಸರಗೋಡು ಪೊಲೀಸರು  ಶೋಧ ನಡೆಸಿದ್ದು, ಹಲವು  ಬಸ್ಸು , ವಾಹನ , ವಸತಿಗ್ರಹಗಳಲ್ಲಿ ತಪಾಸಣೆ ನಡೆಸಿದೆ.

ಗಂಟೆಗಳ ಕಾಲ ಶೋಧ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಕೊನೆಗೆ ಕಳ್ನಾಡಿನ  ಮನೆಗೆ ದಾಳಿ ನಡೆಸಿದಾಗ ಮನೆಯಲ್ಲಿ ಅವಿತುಕೊಂಡಿದ್ದ. ಬಳಿಕ ಈತನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News