ಮಂಗಳೂರು ಪೊಲೀಸ್ ಕಮಿಷನರ್ ಚಂದ್ರಶೇಖರ್ ವರ್ಗಾವಣೆ
Update: 2017-05-25 18:21 IST
ಮಂಗಳೂರು, ಮೇ 25: ಮಂಗಳೂರು ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರಿಗೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದು, ಇವರ ಸ್ಥಾನಕ್ಕೆ ಬೆಂಗಳೂರಿನಿಂದ ಎನ್.ಸತೀಶ್ ಕುಮಾರ್ ನೇಮಕಗೊಂಡಿದ್ದಾರೆ. ಚಂದ್ರಶೇಖರ್ ಬೆಂಗಳೂರಿನ ಸಿಐಡಿಯ ಇಒ ವಿಭಾಗದ ಐಜಿಪಿಯಾಗಿ ವರ್ಗಾವಣೆಯಾಗಿದ್ದಾರೆ.
ನೂತನ ಕಮಿಷನರ್ ಆಗಿರುವ ಸತೀಶ್ ಕುಮಾರ್ ಈ ಹಿಂದೆ ಮಂಗಳೂರು, ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಸತೀಶ್ ಕುಮಾರ್ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಸತೀಶ್ ಕುಮಾರ್ ಅವರು ಬೆಂಗಳೂರು ಕೆಎಸ್‌ಆರ್‌ಟಿಸಿಯ ಆಂತರಿಕ ಮತ್ತು ಪರಿಸರ ವಿಭಾಗದಲ್ಲಿ ಡಿಐಜಿಯಾಗಿದ್ದಾರೆ.
ದ.ಕ.ಜಿಲ್ಲಾ ಎಸ್ಪಿಯಾಗಿದ್ದ ಸಂದರ್ಭದಲ್ಲಿ 2008ರಲ್ಲಿ ನಡೆದ ಚರ್ಚ್ ದಾಳಿ ಘಟನೆಯಲ್ಲಿ ಪೊಲೀಸರು ಅದನ್ನು ನಿಯಂತ್ರಿಸುವಲ್ಲಿ ವಹಿಸಿದ ಪಾತ್ರದ ಬಗ್ಗೆ ಸಾಕಷ್ಟು ಅಸಮಾಧಾನಗಳೂ ವ್ಯಕ್ತವಾಗಿದ್ದವು.