×
Ad

ಮೋದಿ ಸರಕಾರದಿಂದ ಬಂಡವಾಳಶಾಹಿ ಪರ ಆಡಳಿತ: ಕೆ.ಶಂಕರ್

Update: 2017-05-25 18:27 IST

ಉಡುಪಿ, ಮೇ 25: ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿ ಮಾಡಿ ರುವುದಾಗಿ ಸುಳ್ಳು ಹೇಳುತ್ತ ಜನರನ್ನು ನಂಬಿಸುವ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷಗಳಲ್ಲಿ ಬಂಡವಾಳಶಾಹಿಗಳ ಪರವಾದ ಆಡಳಿತ ನಡೆಸ ಲಾಗಿದೆಯೇ ಹೊರತು ಜನಪರವಾಗಿ ಆಳ್ವಿಕೆ ಮಾಡಿಲ್ಲ. ದೇಶದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಕೆ.ಶಂಕರ್ ಟೀಕಿಸಿದ್ದಾರೆ.

ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ಪಶ್ಚಿಮ ಬಂಗಾಲದಲ್ಲಿ ರೈತರ, ಕೃಷಿಕೂಲಿಕಾರರ ಮೇಲಿನ ಸರಕಾರಿ ಪ್ರಾಯೋಜಿತ ದಾಳಿಯನ್ನು ಖಂಡಿಸಿ ಉಡುಪಿ ಜಿಲ್ಲಾ ಸಿಪಿಎಂ ಪಕ್ಷ ಗುರುವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಕ್ಲಾಕ್ ಟವರ್ ಎದುರು ಹಮ್ಮಿಕೊಂಡ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಉದ್ಯೋಗ ಸೃಷ್ಠಿ ಮಾಡುವ ಬದಲು ಇದ್ದ ಉದ್ಯೋಗಗಳನ್ನು ಕಿತ್ತುಕೊಳ್ಳ ಲಾಗಿದೆ. ಜಾತಿವಾದ, ಕೋಮುವಾದಕ್ಕೆ ದೇಶವನ್ನು ತಳ್ಳುತ್ತಿದೆ. ಮತಾಂಧ ಶಕ್ತಿ ಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ. ಜನತೆಯ ಹಕ್ಕುಗಳ ಮೇಲೆ ದಾಳಿ ಮಾಡ ಲಾಗುತ್ತಿದೆ. ಜನರಿಗೆ ಮಾತ್ರವಲ್ಲದೆ ಸೈನಿಕರಿಗೂ ಭದ್ರತೆ ಇಲ್ಲದ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.

ಧರಣಿಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಮುಖಂಡ ರಾದ ವಿಶ್ವನಾಥ್ ರೈ, ದಾಸ ಭಂಡಾರಿ, ಸುರೇಶ್ ಕಲ್ಲಾಗರ್, ವಿಠಲ ಪೂಜಾರಿ, ವೆಂಕಟೇಶ್ ಕೋಣಿ, ಶಶಿಧರ ಗೊಲ್ಲ, ಕವಿರಾಜ್, ಕೆ.ಲಕ್ಷ್ಮಣ್ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News