ಮೇ 27ರಂದು ಹರೇಕಳ ಹಾಜಬ್ಬರೊಂದಿಗೆ ಮಾತುಕತೆ
Update: 2017-05-25 18:29 IST
ಉಡುಪಿ, ಮೇ 25: ಉಡುಪಿಯ ಬಿಯಿಂಗ್ ಸೋಶಿಯಲ್ ವತಿಯಿಂದ ಉಡುಪಿ ತ್ರಿಶಾ ಕ್ಲಾಸಸ್ ಹಾಗೂ ಎಂಜಿಎಂ ಕಾಲೇಜಿನ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ‘ಹೆಜ್ಜೆ ಗುರುತು’ ಕಾರ್ಯಕ್ರಮದಲ್ಲಿ ಕಿತ್ತಲೆ ಮಾರಿ ಶಾಲೆ ಕಟ್ಟಿದ ಹರೇಕಳದ ಹಾಜಬ್ಬರೊಂದಿಗೆ ಮಾತುಕತೆ ಮತ್ತು ಅವರ ಯಶೋಗಾಥೆ ಮೇ 27ರಂದು ಸಂಜೆ 5:30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಲಿದೆ.
ಮುಖ್ಯ ಅತಿಥಿಗಳಾಗಿ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ಮಂಗಳೂರು ವಿವಿ ಸೆನೆಟ್ ಸದಸ್ಯ ಅಮೃತ್ ಶೆಣೈ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.