1.11 ಕೋ.ರೂ.ಮುಖಬೆಲೆಯ ಖೋಟಾನೋಟುಗಳು ವಶ,ಇಬ್ಬರ ಸೆರೆ

Update: 2017-05-25 13:05 GMT

ಅಹ್ಮದಾಬಾದ್ ಮೇ 25: ಅಮ್ರೇಲಿಯಲ್ಲಿ ಗುರುವಾರ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ರುವ ಪೊಲೀಸರು, ಅವರ ಬಳಿಯಿಂದ 1.11 ಕೋ.ರೂ.ಮುಖಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾಹಿತಿಯೊಂದರ ಮೇರೆಗೆ ಲಾಥಿ ಪಟ್ಟಣದಿಂದ ಅಮ್ರೇಲಿಗೆ ಬರುತ್ತಿದ್ದ ಸ್ಕೂಟರ್‌ನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅವರ ಬಳಿಯಿದ್ದ ಬ್ಯಾಗಿನ ತುಂಬ 2,000 ಮತ್ತು 500 ರೂ.ಮುಖಬೆಲೆಯ ಖೋಟಾನೋಟುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.

ಅಪರಿಚಿತ ವ್ಯಕ್ತಿಗಳು ತಮಗೆ ಈ ಬ್ಯಾಗ್ ನೀಡಿ ಅಮ್ರೇಲಿಯಲ್ಲಿನ ಕೆಲವು ವ್ಯಕ್ತಿಗಳಿಗೆ ತಲುಪಿಸುವಂತೆ ಸೂಚಿಸಿದ್ದರು ಎಂದು ಆರೋಪಿಗಳಾದ ಸಚಿನ್ ಪರ್ಮಾರ್ ಮತ್ತು ಪರೇಶ್ ಸೋಳಂಕಿ ಅವರು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News