×
Ad

ಪಾಕ್‌ನಲ್ಲಿ ಬಲವಂತದ ವಿವಾಹವಾಗಿದ್ದ ಭಾರತೀಯ ಮಹಿಳೆ ಸ್ವದೇಶಕ್ಕೆ

Update: 2017-05-25 18:47 IST

ಹೊಸದಿಲ್ಲಿ, ಮೇ 25: ಪಾಕಿಸ್ತಾನದ ವ್ಯಕ್ತಿಯೋರ್ವನ ಜೊತೆ ಬಲವಂತವಾಗಿ ವಿವಾಹವಾಗಿದ್ದಾರೆನ್ನಲಾದ ಭಾರತೀಯ ಮಹಿಳೆಗೆ ಸ್ವದೇಶಕ್ಕೆ ಮರಳಲು ಇಸ್ಲಮಾಬಾದ್ ಹೈಕೋರ್ಟ್ ಅವಕಾಶ ಮಾಡಿಕೊಡುವುದರೊಂದಿಗೆ ಪಾಕ್ ಪೊಲೀಸರ ಬೆಂಗಾವಲಿನೊಂದಿಗೆ ಆಕೆಯನ್ನು ಅಮೃತಸರದ ಬಳಿಯ ವಾಘಾ ಗಡಿಭಾಗಕ್ಕೆ ತಲುಪಿಸಲಾಗಿದೆ. ಬಳಿಕ ಭಾರತದ ಅಧಿಕಾರಿಗಳ ನೆರವಿನಿಂದ ಈಕೆ ವಾಘಾ ಗಡಿದಾಟಿ ಭಾರತಕ್ಕೆ ಮರಳಿದರು.

ಈಕೆಯನ್ನು ಭಾರತದ ಮಗಳು ಎಂದು ಬಣ್ಣಿಸಿರುವ ವಿದೇಶ ವ್ಯವಹಾರ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್, ನೀವು ಅನುಭವಿಸಿದ ಯಾತನೆಯಿಂದ ನನಗೆ ದುಃಖವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

   ಹೊಸದಿಲ್ಲಿ ಮೂಲದ 20ರ ಹರೆಯದ ಉಝ್ಮ ಎಂಬಾಕೆಗೆ ಮಲೇಶ್ಯಾದಲ್ಲಿ ಪಾಕ್ ಮೂಲದ ತಾಹಿರ್ ಆಲಿ ಎಂಬಾತನ ಪರಿಚಯವಾಗಿದ್ದು ಬಳಿಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು . ಈ ಮಧ್ಯೆ ಉಝ್ಮೆರನ್ನು ಉಪಾಯದಿಂದ ಪಾಕ್‌ಗೆ ಕರೆಸಿಕೊಂಡ ಆಲಿ, ಅಲ್ಲಿ ಆಕೆಗೆ ಪ್ರಾಣಭಯ ಒಡ್ಡಿ ಮೇ 3ರಂದು ಬಲವಂತವಾಗಿ ವಿವಾಹವಾಗಿದ್ದ ಎನ್ನಲಾಗಿದೆ. ನಂತರ ಆತನ ಮನೆ ತ್ಯಜಿಸಿದ್ದ ಉಝ್ಞಿ ಇಸ್ಲಮಾಬಾದಿನಲ್ಲಿರುವ ಭಾರತೀಯ ದೂತಾವಾಸದಲ್ಲಿ ಆಶ್ರಯ ಪಡೆದಿದ್ದು, ಮೊದಲ ವಿವಾಹದಿಂದ ತನಗೆ ಜನಿಸಿರುವ ಪುತ್ರಿಯ ಆರೋಗ್ಯ ಹದಗೆಟ್ಟಿರುವ ಕಾರಣ ತನಗೆ ಭಾರತಕ್ಕೆ ಮರಳು ಅವಕಾಶ ಮಾಡಿಕೊಡಬೇಕೆಂದು ಇಸ್ಲಮಾಬಾದ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅಲ್ಲದೆ ತಾಹಿರ್ ಆಲಿ ಬಳಿ ಇರುವ ತನ್ನ ವಲಸೆ ದಾಖಲೆಗಳನ್ನು ಮರಳಿಸಲು ಕ್ರಮ ಕೈಗೊಳ್ಳಬೇಕೆಂದೂ ಕೋರಿದ್ದರು.

ಇದನ್ನು ಪುರಸ್ಕರಿಸಿದ ನ್ಯಾಯಾಲಯ, ದಾಖಲೆಗಳನ್ನು ಮರಳಿಸುವಂತೆ ಆಲಿಗೆ ಸೂಚಿಸಿತ್ತು ಮತ್ತು ಉಝ್ಮಾ ಭಾರತಕ್ಕೆ ಮರಳಲು ಅನುಮತಿ ನೀಡಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News