ಬೈಕ್-ಕಾರು ಢಿಕ್ಕಿ: ಬೈಕ್ ಸವಾರನಿಗೆ ಗಂಭೀರ ಗಾಯ
Update: 2017-05-25 19:16 IST
ಬೆಳ್ತಂಗಡಿ, ಮೇ 25: ಬೈಕ್ ಹಾಗು ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಾರ್ಮಾಡಿ ದೇವಸ್ಥಾನದ ಮುಂಭಾಗದಲ್ಲಿ ನಡೆದಿದೆ.
ಚಾರ್ಮಾಡಿ ಗೇಟ್ ನಲ್ಲಿ ಮರಳು ತುಂಬಿದ ಲಾರಿಯೊಂದನ್ನು ನಿಲ್ಲಿಸಲು ಪೊಲೀಸರು ಸೂಚನೆ ನೀಡಿದ್ದು, ಈ ಸಂದರ್ಭ ಮುಂದಕ್ಕೆ ಹೋದ ಲಾರಿಯನ್ನು ಪೊಲೀಸ್ ಪೇದೆಯೊಬ್ಬರು ಬೆನ್ನಟ್ಟಿದ್ದಾರೆ. ಬೈಕ್ ಚಾರ್ಮಾಡಿ ದೇವಸ್ಥಾನ ಸಮೀಪಿಸುತ್ತಿದ್ದಂತೆ ಲಾರಿಯನ್ನು ಹಿಂದಿಕ್ಕಲು ಪ್ರಯತ್ನಿಸಿದ್ದು, ಮುಂದಿನಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಪೊಲೀಸ್ ಪೇದೆಯ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.