ಬಂಟ್ವಾಳ: ಅಕ್ರಮ ಮರಳು ಅಡ್ಡೆಗೆ ದಾಳಿ -8 ಲಾರಿ ಸಹಿತ ಸೊತ್ತುಗಳು ಪೊಲೀಸರ ವಶಕ್ಕೆ
Update: 2017-05-25 19:55 IST
ಬಂಟ್ವಾಳ, ಮೇ 25: ಪುದು ಗ್ರಾಮದ ಸುಜೀರ್ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಕ್ಕೆಗೆ ದಾಳಿ ನಡೆಸಿದ ಪೊಲೀಸರು 8 ಲಾರಿ ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಸುಜೀರ್ ನೇತ್ರಾವತಿ ನದಿ ಬದಿಯಲ್ಲಿ ಮೂರು ದಕ್ಕೆಯಲ್ಲಿ ಅಕ್ರಮ ಮರಳು ಗಾರಿಕೆ ನಡೆಯುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ನಾಗೇಶ್ ನೇತೃತ್ವದ ಪೊಲೀಸರ ತಂಡ 8 ಲಾರಿ ಸಹಿತ ಮರಳು ಗಾರಿಕೆಗೆ ಉಪಯೋಗಿಸಿದ ಉಪಕರಣಗಳನ್ನು ವಶಕ್ಕೆ ಪಡೆದಿದೆ.
ಈ ಮೂರು ದಕ್ಕೆ ಐತಪ್ಪ ಆಳ್ವ, ಸಿದ್ದೀಕ್, ಲತೀಫ್ ಎಂಬವರಿಗೆ ಸೇರಿದ್ದು ಈ ಮೂವರು ಹಾಗೂ 8 ಲಾರಿ ಚಾಲಕರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.