ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮೂಡುಬಿದಿರೆ ವತಿಯಿಂದ ರಕ್ತದಾನ ಶಿಬಿರ

Update: 2017-05-25 14:30 GMT

ಮೂಡುಬಿದಿರೆ,ಮೇ 25: ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮೂಡುಬಿದಿರೆ, ಕಸ್ತೂರ್ಬಾ ಮೆಡಿಕಲ್ ವಲಯ ಹಾಗೂ ಕಾಲೇಜು (ಜ್ಯೋತಿ) ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ಕೋಟೆಬಾಗಿಲಿನ ಮುಹಮ್ಮದೀಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರವಿವಾರ ಜರುಗಿತು.

ಎಸ್.ಡಿ.ಪಿ.ಐ. ಮೂಲ್ಕಿ-ಮೂಡುಬಿದಿರೆ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಆಶೀಫ್ ಕೋಟೆಬಾಗಿಲು ಅಧ್ಯಕ್ಷತೆ ವಹಿಸಿದ್ದರು.

 ಕೋಟೆಬಾಗಿಲು ಖಿಲ್ಲಾ ಜಾಮಿಯಾ ಮಸೀದಿಯ ಖತೀಬ್ ಮತ್ತು ಇಮಾಮ್ ಮುಹಮ್ಮದ್ ಬದ್ರುಝಮಾ ಆಶ್ರಫಿ ಸಾಬ್ ಕಾರ್ಯಕ್ರಮವನ್ನು ಉದ್ಘಾಟಿಸಿ ದುವಾ ನೆರವೇರಿಸಿದರು.

  ಎಸ್.ಡಿ.ಪಿ.ಐ. ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಹನೀಫ್ ಖಾನ್ ಕೋಡಾಜೆ ಮುಖ್ಯ ಅತಿಥಿಯಾಗಿ ಮಾತನಾಡಿ, ಒಂದು ಯುನಿಟ್ ರಕ್ತ ಒಂದು ಜೀವವನ್ನು ಉಳಿಸೀತು. ರಕ್ತ ಯಾವ ತರಹ ಒಂದೇ ಬಣ್ಣದಲ್ಲಿದೆಯೋ, ಮನುಕುಲವೆಲ್ಲಾ ಒಂದೇ ಎಂದು ತಿಳಿದು ಜೀವ ಉಳಿಸುತ್ತದೋ ಅದೇ ರೀತಿ ನಾವು ಜಾತಿ-ಭೇದ ಮರೆತು ಪ್ರತಿಯೊಬ್ಬರೂ ಒಂದಾಗಬೇಕು. ಸಮಾಜವನ್ನು ಉನ್ನತಿಗೆ ಕೊಂಡೊಯ್ಯಬೇಕು ಎಂದರು.

ಎಸ್.ಡಿ.ಪಿ.ಐ. ಮೂಲ್ಕಿ- ಮೂಡುಬಿದಿರೆ ಕ್ಷೇತ್ರ ಸಮಿತಿಯ ಅಧ್ಯಕ್ಷ ಜಮಾಲ್ ಜೋಕಟ್ಟೆ ಪ್ರಾಸ್ತಾವಿಕ ಮಾತನಾಡಿದರು.

ಕೋಟೆಬಾಗಿಲು ಮುಹಮ್ಮದೀಯ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಪ್ರವೀಣ್ ನಝರತ್, ಮಂಗಳೂರಿನ ಕ್ರಿಯೇಟಿವ್ ಫೌಂಡೇಶನ್ ಮೆಡಿಕಲ್ ಇನ್‌ಚಾರ್ಜ್ ಇಲ್ಯಾಸ್ ಬಜ್ಪೆ, ಪಿ.ಎಫ್.ಐ. ಮೂಡುಬಿದಿರೆ ವಲಯದ ಅಧ್ಯಕ್ಷ ಬಾಷಾ ತೋಡಾರು, ಎಸ್.ಡಿ.ಪಿ.ಐ. ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ಅಶ್ರಫ್ ಮಂಚಿ, ಮಂಗಳೂರು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ.ರಾಧಿಕಾ ಮುಖ್ಯ ಅತಿಥಿಯಾಗಿದ್ದರು.

ಎಸ್.ಡಿ.ಪಿ.ಐ. ಕಾರ್ಯಕರ್ತ ಅನ್ವರ್ ಪುಚ್ಚಮೊಗರು ಧನ್ಯವಾದವಿತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News