ಗಾಳಿಯಿಂದ ಮನೆಗೆ ಹಾನಿ
Update: 2017-05-25 20:06 IST
ಉಡುಪಿ, ಮೇ 25: ನಿನ್ನೆ ರಾತ್ರಿ ಬೀಸಿದ ಗಾಳಿಗೆ ಕುಂದಾಪುರ ತಾಲೂಕು ಆನಗಳ್ಳಿಯ ಗಿರಿಜಾ ಎಂಬವರ ಮನೆಯ 50ಕ್ಕೂ ಅಧಿಕ ಹೆಂಚುಗಳು ಹಾರಿಹೋಗಿದ್ದು, ಮನೆಗೆ ಭಾಗಶ: ಹಾನಿಯಾಗಿದೆ. ಇದರಿಂದ ಸುಮಾರು 5,000ರೂ. ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 5.5ಮಿ.ಮೀ. ಮಳೆಯಾಗಿದೆ. ಕುಂದಾಪುರದಲ್ಲಿ 10.1ಮಿ.ಮೀ., ಉಡುಪಿಯಲ್ಲಿ 4.8ಮಿ.ಮೀ. ಹಾಗೂ ಕಾರ್ಕಳದಲ್ಲಿ 1.5ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾ ಕಂಟ್ರೋಲ್ ರೂಮ್ ತಿಳಿಸಿದೆ.