ಸೌದಿಯ ‘ಕಾಗದರಹಿತ ನ್ಯಾಯಾಲಯ’ಕ್ಕೆ ವಿಶ್ವಸಂಸ್ಥೆ ಪ್ರಶಸ್ತಿ

Update: 2017-05-25 14:58 GMT

ರಿಯಾದ್, ಮೇ 25: ಸೌದಿ ಅರೇಬಿಯದ ‘ಕಾಗದರಹಿತ ನ್ಯಾಯಾಲಯ’ಗಳ ಕಲ್ಪನೆಗಾಗಿ ದೇಶದ ಕಾನೂನು ಸಚಿವಾಲಯಕ್ಕೆ ವಿಶ್ವಸಂಸ್ಥೆ ಪ್ರಾಯೋಜಿತ ತಾಂತ್ರಿಕ ಶ್ರೇಷ್ಠತಾ ಪ್ರಶಸ್ತಿ ಲಭಿಸಿದೆ ಎಂದು ಸಚಿವಾಲಯ ತಿಳಿಸಿದೆ.

ಇತ್ತೀಚೆಗೆ ಜಿನೇವದಲ್ಲಿ ನಡೆದ ಮಾಹಿತಿ ಸೊಸೈಟಿ ಕುರಿತ ವಿಶ್ವ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಶ್ರೇಷ್ಠ ಉಪಕ್ರಮಗಳ ಜಾಗತಿಕ ಸ್ಪರ್ಧೆಯಲ್ಲಿ ಸೌದಿ ಸಚಿವಾಲಯ ಈ ಪ್ರಶಸ್ತಿ ಗೆದ್ದಿದೆ.

ಆರನೆ ವರ್ಷದ ಸ್ಪರ್ಧೆಯಲ್ಲಿ ಸೌದಿ ಅರೇಬಿಯದ ಮಾದರಿಗೆ 11 ಲಕ್ಷಕ್ಕಿಂತಲೂ ಅಧಿಕ ಮತಗಳು ಬಿದ್ದವು.

345 ಮಾದರಿಗಳ ಪಟ್ಟಿಯಿಂದ ಮತದಾರರು ಆಯ್ಕೆ ಮಾಡಬೇಕಾಗಿತ್ತು.

 ದೇಶಾದ್ಯಂತದ ಎಲ್ಲ ನ್ಯಾಯಾಲಯಗಳಲ್ಲಿರುವ ಕಾಗದ ಆಧರಿತ ವ್ಯವಹಾರಗಳನ್ನು ರದ್ದುಪಡಿಸುವ ಗುರಿಯನ್ನು ಇಟ್ಟುಕೊಂಡು ದೇಶದ ಹಲವು ಭಾಗಗಳಲ್ಲಿ ಕಾಗದರಹಿತ ನ್ಯಾಯಾಲಯಗಳನ್ನು ಸೌದಿ ಕಾನೂನು ಸಚಿವರು ಈ ವರ್ಷದ ಜನವರಿಯಲ್ಲಿ ಆರಂಭಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News