‘ಟ್ಯಾಲೆಂಟ್’ ವತಿಯಿಂದ 2000 ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕ ವಿತರಣೆ ಹಾಗೂ ಪ್ರತಿಭಾನ್ವಿತರಿಗೆ ಸನ್ಮಾನ
ಮಂಗಳೂರು: ಮೇ 24, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವ 2000 ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟು ಪುಸ್ತಕಗಳನ್ನು ವಿತರಿಸುವ ಹಾಗೂ ಪ್ರತಿಭಾನ್ವಿತರಿಗೆ ಸನ್ಮಾನಿಸುವ ಕಾರ್ಯಕ್ರಮವು ಮಂಗಳೂರಿನ ಪುರಭವನದಲ್ಲಿ ನಡೆಯಿತು.
ಕ್ರೆಡಾ ಮಂಗಳೂರು ಇದರ ಅಧ್ಯಕ್ಷ ಡಿ.ಬಿ ಮೆಹ್ತಾ, ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಇದೊಂದು ಟಿ.ಆರ್.ಎಫ್‌ನ ಶ್ಲಾಘನೀಯ ಕಾರ್ಯವಾಗಿದೆ. ಕಳೆದ ಹನ್ನೆರಡು ವರ್ಷಗಳಿಂದ ಇಂತಹ ಸೇವೆಯನ್ನು ಅವರು ಮಾಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಹಾಯ ಮಾಡುವುದರ ಜೊತೆಗೆ ಅವರು ಸಾಧಕರಾಗುವಂತೆ ಪ್ರೇರೇಪಿಸುತ್ತಿದ್ದಾರೆ” ಎಂದರು.
ಟಿ.ಆರ್.ಎಫ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾಜಿ ಮುಮ್ತಾಝ್, ಅಲಿ ಕೃಷ್ಣಾಪುರ, ಅಧ್ಯಕ್ಷರು ಮಿಸ್ಬಾಹ್ ನಾಲೆಜ್ ಫೌಂಡೇಶನ್, ನೌಷಾದ್ ಹಾಜಿ ಸೂರಲ್ಪಾಡಿ, ಅಧ್ಯಕ್ಷರು, ನಂಡೆ ಪೆಂಙಳ್ ಸ್ವಾಗತ ಸಮಿತಿ, ಅಬ್ದುಲ್ ಜಲೀಲ್ ಕೃಷ್ಣಾಪುರ, ರಾಜ್ಯಾಧ್ಯಕ್ಷರು, ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್, ಡಾ. ಪ್ರಕಾಶ್ ಶೆಟ್ಟಿ, ಆಡಳಿತ ನಿರ್ದೇಶಕರು, ತೇಜಸ್ ಲ್ಯಾಬ್ಸ್, ಅಹಮದ್ ಶರೀಫ್, ಆಡಳಿತ ನಿರ್ದೇಶಕರು, ಫಾತಿಮಾ ಟ್ರೇಡರ್ಸ್, ಶೇಖ್ ಮೊಯ್ದಿನ್, ಕರ್ನಿರೆ ಗ್ರೂಪ್, ಟಿ.ಆರ್.ಎಫ್ ಸಲಹೆಗಾರರಾದ ಸುಲೈಮಾನ್ ಶೇಖ್ ಬೆಳುವಾಯಿ, ಮೊಹಮ್ಮದ್ ಬೆಳ್ಳಚ್ಚಾರು, ಶ್ರೀಮತಿ ಸಬೀಹಾ ಫಾತಿಮ, ಶ್ರೀಮತಿ ಸವಿತ ಕಡಬ, ಶ್ರೀಮತಿ ಲಿಲ್ಲಿ ಡಿ ಕುನ್ಹ ಕುಲಶೇಖರ, ಮುಮ್ತಾಝ್ ಪಕ್ಕಲಡ್ಕ, ಆತಿಕಾ ರಫೀಕ್, ಝೊಹರಾ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ಪೂರ್ಣಾನಂದ ಕಡಬ, ಮೈನಾ ಅಂಜುಮ್ ಕೆ.ಕೆ, ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ದರ್ಶನ್ ಪದವಿನಂಗಡಿ, ಆಯಿಶತುಲ್ ಶಮೀಮ ಪುತ್ತೂರು, ಸಮೀಹಾ ಶಾದ್ ಪಕ್ಕಲಡ್ಕ, ಡ್ಯಾಫ್ನಿ ಮೊನಾಲಿಸಾ ಡಿಕುನ್ಹ ಕುಲಶೇಖರ, ಸಮಾಜ ಸೇವಕರಾದ ಹಾಜಿ ಇಬ್ರಾಹಿಂ ಖಾಸಿಂ ಉಳ್ಳಾಲ, ಇರ್ಷಾದ್ ವೇಣೂರು, ಬೈಕ್ ರೇಸ್ ಚಾಂಪಿಯನ್ ಅದ್ನಾನ್ ಅಹಮದ್ ಮಂಗಳೂರು, ಅಮೇರಿಕಾದಲ್ಲಿ ನಡೆದ ವೈಜ್ಞಾನಿಕ ಅನ್ವೇಷಣಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಅಮನ್ ಕೆ.ಎ ಪುತ್ತೂರು, ನಚಿಕೇತ್ ಕುಮಾರ್ ಉಪ್ಪಿನಂಗಡಿ, ಕರಾಟೆ ಚಾಂಪಿಯನ್ ಮೊಹಮ್ಮದ್ ಶಯಾನ್ ಉಳ್ಳಾಲ ರವರನ್ನು ಶಾಲು ಹೊದೆಸಿ, ಸ್ಮರಣಿಕೆ ಮತ್ತು ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ರಿಯಾಝ್ ಅಹಮದ್ ಕಣ್ಣೂರು ಸ್ವಾಗತಿಸಿದರು. ಮುಹಮ್ಮದ್ ಯು.ಬಿ ಪ್ರಸ್ತಾವನೆಗೈದರು. ಡಿ ಅಬ್ದುಲ್ ಹಮೀದ್ ಕಣ್ಣೂರು ಫಲಾನುಭವಿಗಳ ಪಟ್ಟಿ ವಾಚಿಸಿದರು. ಜಸೀಮ್ ಸಜಿಪ ಧನ್ಯವಾದಗೈದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.