ಬ್ರಿಟನ್: ಹೆಚ್ಚುತ್ತಿರುವ ಮುಸ್ಲಿಮ್ ವಿರೋಧಿ ಆಕ್ರಮಣಗಳು

Update: 2017-05-25 15:46 GMT

ಲಂಡನ್, ಮೇ 25: ಮ್ಯಾಂಚೆಸ್ಟರ್ ಬಾಂಬ್ ದಾಳಿಯ ಬಳಿಕ ಬ್ರಿಟನ್‌ನಲ್ಲಿ ಹಲವಾರು ಮುಸ್ಲಿಮ್ ವಿರೋಧಿ ಘರ್ಷಣೆಗಳು ನಡೆದಿರುವ ಬಗ್ಗೆ ವರದಿಯಾಗಿವೆ.

ಮ್ಯಾಂಚೆಸ್ಟರ್ ಇಸ್ಲಾಮಿಕ್ ಹೈಸ್ಕೂಲ್‌ನ 14 ವರ್ಷದ ವಿದ್ಯಾರ್ಥಿನಿಯೊಬ್ಬರಿಗೆ ದಾರಿಹೋಕನೊಬ್ಬ ವ್ಯಂಗ್ಯವಾಗಿ ‘‘ಬಾಂಬ್ ಹಾಕುವವರನ್ನು ನೀವು ತಡೆಯುವುದು ಯಾವಾಗ?’’ ಎಂದು ಪ್ರಶ್ನಿಸಿದನೆನ್ನಲಾಗಿದೆ.

ಈ ಘಟನೆಯಿಂದ ವಿದ್ಯಾರ್ಥಿನಿ ನೊಂದಿದ್ದಾರೆ ಎಂದು ಶಾಲೆಯ ಪ್ರಧಾನ ಶಿಕ್ಷಕಿ ಮೋನಾ ಮುಹಮ್ಮದ್ ‘ರೇಡಿಯೊ 4’ಗೆ ಹೇಳಿದ್ದಾರೆ.

ಮಂಗಳವಾರ ಮ್ಯಾಂಚೆಸ್ಟರ್‌ನ ಆಕ್ಸ್‌ಫರ್ಡ್ ರಸ್ತೆಯಲ್ಲಿ ಅಪರಿಚಿತನೊಬ್ಬ ಮುಸ್ಲಿಮ್ ಮಹಿಳೆಯೊಬ್ಬರ ಮೇಲೆ ಉಗುಳಿದನು ಎಂದು ‘ಟ್ಯಾಬ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News