×
Ad

ಶಾಲಾ ದಾಖಲಾತಿ ವೇಳೆ ಕಾನೂನಿನಂತೆ ಶುಲ್ಕ ಸಂಗ್ರಹ: ಶಾಲೆಗಳಿಗೆ ಡಿಡಿಪಿಐ ಸ್ಪಷ್ಟ ಸೂಚನೆ

Update: 2017-05-25 21:24 IST

ಉಡುಪಿ, ಮೇ 25: ವಿದ್ಯಾರ್ಥಿಗಳ ದಾಖಲಾತಿ ವೇಳೆ ಶಾಲಾ ಆಡಳಿತ ಮಂಡಳಿ ಮನ ಬಂದಂತೆ ಶುಲ್ಕ ಸಂಗ್ರಹಿಸುವಂತಿಲ್ಲ ಎಂದು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಕೆಲವು ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಶುಲ್ಕ ಸಂಗ್ರಹಕ್ಕೆ ಸಂಬಂಧಿಸಿದಂತೆ ದೂರುಗಳು ಬರುತ್ತಿದ್ದು, ಕಾನೂನು ಮೀರಿ ಶುಲ್ಕ ಸಂಗ್ರಹಿಸಿದರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಉಪನಿರ್ದೇಶಕರು ನೀಡಿದ್ದಾರೆ. ಶಾಲೆಗಳಲ್ಲಿ ನಿಗದಿತ ಶುಲ್ಕ ಬಾಕಿ ಇಟ್ಟಿಕೊಂಡಿರುವ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡುವುದು ಕಡ್ಡಾಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಶುಲ್ಕ ಪಾವತಿಸಲೇ ಬೆೀಕಾಗುತ್ತದೆ ಎಂದವರು ತಿಳಿಸಿದರು.

ಒಂದು ಅನುದಾನ ರಹಿತ ಶಾಲೆಯಲ್ಲಿ ಒಟ್ಟು ನೀಡುವ ವೇತನ (ಶಿಕ್ಷಕರು ಮತ್ತು ಸಿಬ್ಬಂದಿ)ಮತ್ತು ಇದರ ಶೇ.30ರಷ್ಟು ಆಡಳಿತಾತ್ಮಕ ವೆಚ್ಚ ಈ ಮೊತ್ತವನ್ನು ಕಳೆದ ಸಾಲಿನ ವಿದ್ಯಾರ್ಥಿಗಳ ಸಂಖ್ಯೆಯಿಂದ ಭಾಗಿಸಿದಾಗ ಬರುವ ಮೊತ್ತವನ್ನು ವಿದ್ಯಾರ್ಥಿಗಳಿಂದ ಬೋಧನಾ ವೆಚ್ಚವಾಗಿ ಶುಲ್ಕ ಸಂಗ್ರಹಿಸುವ ಅವಕಾಶವಿದೆ. ಇದನ್ನು ಆಡಳಿತ ಮಂಡಳಿ ಪ್ರತೀ ವರ್ಷ ಫೆಬ್ರವರಿ ತಿಂಗಳಲ್ಲಿ ನಮೂನೆ-2ರಲ್ಲಿ ಪ್ರಕಟಿಸಬೇಕು. ವರ್ಷದ ಮಧ್ಯದಲ್ಲಿ ಯಾವುದೇ ಹೊಸ ಶುಲ್ಕ ವಿಧಿಸುವಂತಿಲ್ಲ ಎಂದ ಅವರು, ಇಂತಹ ಪ್ರಕರಣಗಳ ಉಲ್ಲಂಘನೆಯಾದಲ್ಲಿ ಇಲಾಖೆಯಿಂದ ಕ್ರಮ ಜರಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News