×
Ad

ರೈತ ಸೇವಾ ಕೇಂದ್ರ; ಆಸಕ್ತರಿಗೆ ಅವಕಾಶ

Update: 2017-05-25 21:30 IST

ಉಡುಪಿ, ಮೇ 25: ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆಯಲ್ಲಿ ರೈತ ಸೇವಾ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವಿವಿಧ ಸಂಘ ಸಂಸ್ಥೆಗಳು, ಸಹಕಾರಿ ಸಂಘಗಳು, ಕರಕುಶಲ ವಸ್ತುಗಳ ಮಾರಾಟಗಾರರು, ಸಾವಯವ ವಸ್ತುಗಳ ಮಾರಾಟ ಗಾರರು, ಸ್ಥಳೀಯ ರೈತರ ಆರ್ಥಿಕತೆಯನ್ನು ಉತ್ತೇಜಿಸುವ ವ್ಯಾಪಾರಸ್ಥರು, ಹೂವಿನವಹಿವಾಟುದಾರರು/ಮಾರಾಟಗಾರರು ಸ್ಥಳೀಯವಾಗಿ ಉತ್ಪಾದಿಸುವ ವಿವಿಧ ಉತ್ಪನ್ನಗಳು, ಇನ್ನಿತರೇ ಯಾವುದೇ ರೈತ ಸ್ನೇಹಿ ಚಟುವಟಿಕೆ ಗಳನ್ನೋಳಗೊಂಡ ಸಂಸ್ಥೆ/ವಹಿವಾಟುದಾರಾರು ರೈತ ಸೇವಾ ಕೇಂದ್ರದ ಪ್ರಾಂಗಣದಲ್ಲಿ ಮಳಿಗೆಗಳನ್ನು ಸರಕಾರ ನಿಗದಿಪಡಿಸಿದ ಕನಿಷ್ಠ ಬಾಡಿಗೆ 2,000 (ಪ್ರತಿ ತಿಂಗಳಿಗೆ) ಹಾಗೂ 15,000 ರೂ. ಮುಂಗಡ ಠೇವಣಿಯೊಂದಿಗೆ ಪ್ರಾರಂಭಿಸಬಹುದಾಗಿದೆ.

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿ (ದೂರವಾಣಿ: 0820-2531950) ಅಥವಾ ಸಹಾಯಕ ತೋಟಗಾರಿಕೆ ನಿರ್ದೇಶಕರು, ಪುಷ್ಪ ಹರಾಜು ಕೇಂದ್ರ ಇವರ ಕಚೇರಿಯನ್ನು (ದೂರವಾಣಿ:0820-2520590) ಸಂಪರ್ಕಿುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News