×
Ad

ಹೊಂಡಕ್ಕೆ ಬಿದ್ದು ಬಾಲಕಿ ಮೃತ್ಯು

Update: 2017-05-25 21:33 IST

ಶಂಕರನಾರಾಯಣ, ಮೇ 25: ಹೆಂಗವಳ್ಳಿ ಹೊಳೆಯ ಮಧ್ಯೆ ಇರುವ ನೀರು ತುಂಬಿದ ಹೊಂಡಕ್ಕೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಇಂದು ಬೆಳಗ್ಗೆ 11:30ರ ಸುಮಾರಿಗೆ ನಡೆದಿದೆ.

ಮೃತರನ್ನು ಹೆಂಗವಳ್ಳಿ ಗ್ರಾಮದ ತೊಂಬತ್ತು ನಿವಾಸಿ ಮೋಹನ್ ಮಡಿವಾಳ ಹಾಗೂ ಸರಸ್ವತಿ ದಂಪತಿಯ ಪುತ್ರಿ ಸ್ವಾತಿ(12) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಮಳೆ ಬಂದ ಕಾರಣ ಬತ್ತಿ ಹೋಗಿದ್ದ ಹೆಂಗವಳ್ಳಿ ಹೊಳೆಯ ನಡುವೆ ಇದ್ದ ಐದು ಅಡಿ ಆಳದ ಹೊಂಡದಲ್ಲಿ ನೀರು ತುಂಬಿತ್ತು. ಇಂದು ಬೆಳಗ್ಗೆ ಸ್ವಾತಿ ಸಹಿತ ಮೂವರು ಮಕ್ಕಳು ಹೊೆ ಸಮೀಪ ಆಟ ಆಡಲು ಹೋಗಿದ್ದರು.

ಆ ವೇಳೆ ಸ್ವಾತಿ ನೀರು ತುಂಬಿದ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಳು. ಈಕೆ ಹೆಂಗವಳ್ಳಿ ಶಾಲೆಯ ಆರನೆ ತರಗತಿಯ ವಿದ್ಯಾರ್ಥಿನಿ. ಮೋಹನ್ ಅವರ ಇಬ್ಬರು ಮಕ್ಕಳಲ್ಲಿ ಈಕೆ ದೊಡ್ಡವಳು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News