ಕಾರು- ರಿಕ್ಷಾ ಢಿಕ್ಕಿ: ಐವರಿಗೆ ಗಾಯ
Update: 2017-05-25 21:34 IST
ಬೈಂದೂರು, ಮೇ 25: ಶಿರೂರು ಸಮೀಪದ ದೇವರ ಹಾಡಿಕೊಡ್ಲು ಎಂಬಲ್ಲಿ ಮೇ 24ರಂದು ಬೆಳಗ್ಗೆ ಕಾರು ಹಾಗೂ ರಿಕ್ಷಾ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾದಲ್ಲಿದ್ದ ಐವರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ರಿಕ್ಷಾ ಚಾಲಕ ಚಂದ್ರ ಕೊಠಾರಿ, ಪ್ರಯಾಣಿಕರಾದ ಗೋಪಾಲ, ಯಮುನಾ, ಧನುಷ್ ಎಂದು ಗುರುತಿಸಲಾಗಿದೆ. ಇವರಲ್ಲಿ ತೀವ್ರ ವಾಗಿ ಗಾಯಗೊಂಡಿರುವ ಧನುಷ್‌ನನ್ನು ಮಣಿಪಾಲ ಆಸ್ಪತ್ರೆ ಹಾಗೂ ಉಳಿದ ವರನ್ನು ಕುಂದಾಪುರ ಖಾಸಗಿ ಆಸ್ಪ್ಪೆಗೆ ದಾಖಲಿಸಲಾಗಿದೆ.
ತೂದಲ್ಲಿ ಕಡೆಗೆ ಹೋಗುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತು. ಇದರಿಂದ ರಿಕ್ಷಾ ಪಲ್ಟಿಯಾಗಿ ರಸ್ತೆಯ ಪಕ್ಕದಲ್ಲಿರುವ ಮಣ್ಣು ರಸ್ತೆಗೆ ಬಿದ್ದಿತು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.