×
Ad

ಕೋಡಿಂಬಾಳ: ರೈಲ್ವೇ ಕೆಳ ಸೇತುವೆ ಕಾಮಗಾರಿ ವೇಳೆ ಮಣ್ಣು ಕುಸಿತ

Update: 2017-05-25 21:57 IST

ಕಡಬ,ಮೇ 25 : ಕೋಡಿಂಬಾಳ ಸಮೀಪದ ನಾಕೂರು ಎಂಬಲ್ಲಿ ರೈಲ್ವೇ ಕೆಳ ಸೇತುವೆ ಕಾಮಗಾರಿ ನಡೆಸುತ್ತಿದ್ದ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಮೇ.25ರಂದು ನಡೆದಿದೆ.

ಮೈಸೂರು ಮೂಲದ ಗಿರೀಶ್ ಹಾಗೂ ಇನ್ನೋರ್ವ ಕಾರ್ಮಿಕರು ಗಾಯಗೊಂಡವರು. ಇವರು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಡಿಂಬಾಳ ನಾಕೂರು ಎಂಬಲ್ಲಿ ರೈಲ್ವೇ ಕೆಳ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಮಣ್ಣು ಜರಿದು ಬಿದ್ದಿದ್ದು ಇಬ್ಬರು ಕಾರ್ಮಿಕರು ಮಣ್ಣಿನಡಿಗೆ ಬಿದ್ದರು. ಕೂಡಲೇ ಅವರು ಇತರ ಕಾರ್ಮಿಕರು ಮಣ್ಣಿನಡಿಯಿಂದ ಮೆಲಕ್ಕೆತ್ತಿ ಪಾರು ಮಾಡಿದ್ದರು, ಬಳಿಕ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಥಳಕ್ಕೆ ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಕಡಬ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ, ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಶೆರೀಫ್ ಎ.ಎಸ್. ಮೊದಲಾದವರು ಘಟನಾ ಸ್ಥಳದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News